ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಶೇಸಿ (ಕುಷ್ಟಗಿ): ಹೈನೋದ್ಯಮದಿಂದ ಉದ್ಯೋಗಾವಕಾಶ

ಭೂಮಿಪೂಜೆ: ನಿಡಶೇಸಿಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ
Last Updated 28 ಜುಲೈ 2021, 6:45 IST
ಅಕ್ಷರ ಗಾತ್ರ

ನಿಡಶೇಸಿ (ಕುಷ್ಟಗಿ): ‘ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದ ನಂತರ ಕೊಪ್ಪಳ ಜಿಲ್ಲೆಯಲ್ಲಿಯೂ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ದೊರೆತಿದ್ದು, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ತಾಲ್ಲೂಕಿನ ನಿಡಶೇಸಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಹೈನುಗಾರಿಕೆ
ಯನ್ನೇ ಅವಲಂಬಿಸಿರುವ ಅನೇಕ ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿವೆ. ಸಹಕಾರ ತತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಗೆ ಸಂಘಗಳ ಸದಸ್ಯರು, ಗ್ರಾಮಸ್ಥರ ಸಹಕಾರ, ಆಡಳಿತ ಮಂಡಳಿಯ ಪ್ರಾಮಾಣಿಕತೆ ಅಗತ್ಯ. ಇದರಿಂದ ಭವಿಷ್ಯದಲ್ಲಿ ಹೈನುಗಾರಿಕೆಯಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.

ನಿಡಶೇಸಿ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹5 ಲಕ್ಷ ಆರ್ಥಿಕ ನೆರವು ಒದಗಿಸುವುದಾಗಿ ಭರವಸೆ ನೀಡಿದರು.

ಹಾಲು ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ, ನಿರ್ದೇಶಕಿ ಕವಿತಾ ಪ್ರವೀಣ ಗುಳಗಣ್ಣವರ, ಕ್ಷೇತ್ರ ಸಹಾಯಕರಾದ ಗವಿಸಿದ್ದಪ್ಪ, ರತ್ನಮ್ಮ, ಪಶು ವೈದ್ಯಾಧಿಕಾರಿ ಡಾ.ಪ್ರವೀಣ, ಸಮಾಲೋಚಕ ಸತ್ಯನಾರಾಯಣ ಅಂಗಡಿ, ಸೋಮಶೇಖರ ಗುರಿಕಾರ, ಕಳಕಯ್ಯ ಧೂಪದ, ವಿಸ್ತರಣೆ ಅಧಿಕಾರಿ ಬಸವರಾಜ ಯರದೊಡ್ಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನಪ್ಪ ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದ್ಯಾಮಣ್ಣ, ಅಭಿವೃದ್ಧಿ ಅಧಿಕಾರಿ ಶಿವಪುತ್ರಪ್ಪ ಬರಿದೆಲಿ, ಸದಸ್ಯರಾದ ರಾಯಪ್ಪ ಪೂಜಾರ, ಮಂಜುನಾಥ ಗುಳಗುಳಿ, ಈರಪ್ಪ ಮಕಾಶಿ, ಪ್ರಮುಖರಾದ ಪರಶುರಾಮಸಿಂಗ್ ಪೂಜಾರ, ಶರಣಪ್ಪ ಹಾದಿಮನಿ, ದೊಡ್ಡಪ್ಪ ಪೂಜಾರ, ಬಸವರಾಜ ದಳಪತಿ, ಧೀರೇಂದ್ರರಾವ ಮುಜಮದಾರ, ಕನಕಪ್ಪ ಅಗಸಿಮುಂದಿನ, ಗೋವಿಂದಪ್ಪ ಹಾವರಗಿ, ಹನಮಪ್ಪ ಬಂಡಿಹಾಳ, ಮಂಜುನಾಥ ಕರಿಭೀಮಪ್ಪನವರ, ರಾಮಣ್ಣ ಬಂಡಿಹಾಳ, ಮಹಾದೇವಪ್ಪ ಪೂಜಾರ, ಚನ್ನಪ್ಪ ಹುಣಸಿಹಾಳ, ನಿಂಗಪ್ಪ ಬೇನಾಳ ಹಾಗೂ ಭೀಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT