ಶುಕ್ರವಾರ, ಆಗಸ್ಟ್ 6, 2021
25 °C

ಕೊಪ್ಪಳ: ಪರಸ್ಪರ ದ್ವಿಚಕ್ರ ವಾಹನಗಳ ಡಿಕ್ಕಿ ಇಬ್ಬರು ಸವಾರರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಘಾತ–ಸಾಂಕೇತಿಕ ಚಿತ್ರ

ಕನಕಗಿರಿ (ಕೊಪ್ಪಳ ಜಿಲ್ಲೆ): ದ್ವಿಚಕ್ರ ವಾಹನಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಸ್ಥಳಗಳಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಚಿಕ್ಕ ಮಾದಿನಾಳ ಗ್ರಾಮದ ಕ್ರಾಸ್‌ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಸಿಂಧನೂರು ತಾಲ್ಲೂಕಿನ ಬಂಗಾಲಿ ಕ್ಯಾಂಪ್ ನಿವಾಸಿ ಭೋಲಾಕ್ ಅಬಿಡು(35), ಹಾಗೂ ತಾಲ್ಲೂಕಿನ ಇಂಗಳದಾಳ ತಾಂಡದ ದ್ಯಾಮಣ್ಣ ಮೇಣೆದಾಳ (34)  ಎಂದು ಗುರುತಿಸಲಾಗಿದೆ.

ಬಂಗಾಲಿ ಕ್ಯಾಪ್‌ನ ವ್ಯಕ್ತಿ ಕೊಪ್ಪಳದ ಕಡೆಗೆ, ಇಂಗಳದಾಳ ತಾಂಡದ  ವ್ಯಕ್ತಿ ಕನಕಗಿರಿ ಕಡೆಗೆ ಬರುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಬಂಗಾಲಿ ಕ್ಯಾಂಪ್ ಹಿಂಬದಿ ಸವಾರ ನಿಶ್ಚಯ ಗಾಯಗೊಂಡಿದ್ದು, ಇಲ್ಲಿನ‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು