ಕನಕಗಿರಿ: ಗಡಿ ಭದ್ರತಾ ಪಡೆಯ ಯೋಧ ಭೀಮೇಶ ಅವರನ್ನು ಚಿಕ್ಕಡಂಕನಕಲ್ ಮತ್ತು ಹಿರೇಡಂಕನಕಲ್ ಗ್ರಾಮಸ್ಥರು ಗುರುವಾರ ಅದ್ದೂರಿಯಾಗಿ ಮೆರವಣಿಗೆ ನಡೆಸಿ ಬರಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಹಿರೇಡಂಕನಕಲ್ ಗ್ರಾಮದ ರೈತ ಕುಟುಂಬದ ಈರಮ್ಮ ನಾಗಭೂಷಣ ಅವರ ಪುತ್ರ ಭೀಮೇಶ ಬಿ.ಕಾಂ ಪದವೀಧರರಾಗಿದ್ದು, ಕಳೆದ ವರ್ಷ ಗಡಿ ಭದ್ರತಾ ಪಡೆಗೆ ಜ.21ರಂದು ನೇಮಕಗೊಂಡಿದ್ದಾರೆ.

ಒಂದು ವರ್ಷದ ತರಬೇತಿ ಮುಗಿಸಿಕೊಂಡು ಹಿರೇಡಂಕನಕಲ್ ಗ್ರಾಮಕ್ಕೆ ಬರುವ ವಿಷಯ ತಿಳಿದ ಚಿಕ್ಕಡಂಕನಕಲ್ ಗ್ರಾಮಸ್ಥರು ವಾಲ್ಮೀಕಿ ವೃತ್ತದಲ್ಲಿ ಬೃಹತ್ ಪ್ರಮಾಣದ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಹಿಳೆಯರು ಕಳಸ ಹಿಡಿದು ಬೆಳಗಿದರು. ಮೆರವಣಿಗೆ ಸಮಯದಲ್ಲಿ ಯೋಧನ ಕಾಲಿಗೆ ನೀರು ಹಾಕಿ, ಜಯಘೋಷ ಹಾಕಿ ಗಮನ ಸೆಳೆದರು. ವಿದ್ಯಾರ್ಥಿಗಳು ಯೋಧನಿಗೆ ಪುಷ್ಪಾರ್ಚನೆ ಮಾಡಿ ಹಸ್ತಲಾಘವ ಮಾಡಿದರು.

ಹಿರೇಡಂಕನಕಲ್ ಗ್ರಾಮದ ಭೀಮೇಶ ಅವರ ಮನೆಯವರೆಗೆ ಬೈಕ್ ರ್ಯಾಲಿ ನಡೆಸಿದರು. ಈ ಸಮಯದಲ್ಲಿ ಯೋಧನ ತಂದೆ-ತಾಯಿ ಅವರನ್ನೂ ಗೌರವಿಸಲಾಯಿತು.

ಯೋಧ ಭೀಮೇಶ ಮಾತನಾಡಿ, ‘ಜಮ್ಮುಕಾಶ್ಮೀರದಲ್ಲಿ ಒಂದು ವರ್ಷದ ತರಬೇತಿ ಮುಗಿಸಿದ್ದು ಹತ್ತು ದಿನಗಳ ರಜೆ ಮುಗಿಸಿ
ಅಲ್ಲಿಯೇ ಕರ್ತವ್ಯಕ್ಕೆ ಹಾಜರಾಗುತ್ತಿರುವೆ. ಎರಡು ಗ್ರಾಮಗಳ ಜನತೆ ನೀಡಿದ ಪ್ರೀತಿ, ಗೌರವಕ್ಕೆ ಬೆಲೆ ಕಟ್ಟಲಾಗುವುದಿಲ್ಲ’ ಎಂದರು.

‘ಜನತೆ ನೀಡಿದ ಆದರದ ಗೌರವ ಖುಷಿ ತಂದಿದ್ದು ಬದುಕಿಗೆ ಸ್ಫೂರ್ತಿಯಾಗಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿದರು. ಗ್ರಾ.ಪಂ ಸದಸ್ಯರಾದ ಹುಸೇನಸಾಬ ಮುಜಾವರ, ಶರಣಪ್ಪ ಸಾಹುಕಾರ, ಮಾರುತಿ, ವಕೀಲರಾದ ಶಿವನಗೌಡ, ಯಂಕನಗೌಡ, ಪ್ರಮುಖರಾದ ಕೆರೆಯಪ್ಪ ಪ್ಯಾಟಿ, ಕರಿಬೀರಪ್ಪ ಗೌಡ್ರ, ಜೀರಾಳ ಗುಡದಪ್ಪ, ವಿರೂಪಾಕ್ಷಗೌಡ ಮಾಲಿಪಾಟೀಲ, ಕೆರೆಯಪ್ಪ ಉಪ್ಪಾರ, ಸಿದ್ರಾಮೇಶ ಬೇವಿನಗಿಡಣ, ಶರಣಬಸವ ಪಗಡದಿನ್ನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.