ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಬಟನ್ ರೋಸ್‌ ಕೃಷಿಯಲ್ಲಿ ಅಧಿಕ ಆದಾಯ

ಸಾಧಕ ರೈತ ದೇವೇಂದ್ರಗೌಡ ಪೊಲೀಸ್ ಪಾಟೀಲ
Last Updated 17 ಜನವರಿ 2023, 7:14 IST
ಅಕ್ಷರ ಗಾತ್ರ

ಕುಕನೂರು: ರೈತರು ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ. ಮೆಕ್ಕೆಜೋಳ, ಶೇಂಗಾ ಮತ್ತು ಹತ್ತಿಯಂಥ ಬೆಳೆಗಳನ್ನು ಬಿಟ್ಟು ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

ಅಂಥ ರೈತರಲ್ಲಿ ಒಬ್ಬರೂ ತಾಲ್ಲೂಕಿನ ಹೊನ್ನುಣಿಸಿ ಗ್ರಾಮದ ರೈತ ಪದವೀಧರ ದೇವೇಂದ್ರಗೌಡ ಪೊಲೀಸ್ ಪಾಟೀಲ.
ದೇವೇಂದ್ರಪ್ಪ ಎಲ್ಲ ರೈತರಂತೆ ಯೋಚಿಸದೆ ತೋಟಗಾರಿಕಾ ಬೆಳೆಯಾದ ಬಟನ್ ರೋಸ್ ಬೆಳೆದಿದ್ದಾರೆ. ತಮಗಿದ್ದ ಒಂದೂ ಎಕರೆ ಜಮೀನಿನಲ್ಲಿ ಬೆಂಗಳೂರಿನಿಂದ ಬಟನ್ ರೋಸ್ ಸಸಿ ತಂದು ಹಚ್ಚಿದ್ದಾರೆ. ಸರ್ಕಾರದ ನರೇಗಾ ಯೋಜನೆಯಿಂದ ₹1 ಲಕ್ಷ ಸಹಾಯಧನ ದೊರೆತಿದೆ.

ಐದು ಅಡಿ ಅಂತರದಲ್ಲಿ ಸುಮಾರು 4 ಸಾವಿರ ಬಟನ್ ರೋಸ್ ಸಸಿಗಳನ್ನು ಹಚ್ಚಿರುವ ದೇವೇಂದ್ರ ಗೌಡರಿಗೆ ಮೂರು ತಿಂಗಳ ನಂತರ ಬಟನ್ ರೋಜ್ ಆದಾಯ ಬರಲಾರಂಭಿಸಿದೆ.

ಆರಂಭದಲ್ಲಿ ಕೆಜಿಗಟ್ಟಲೆ ಬರುತ್ತಿದ್ದು, ಬಟನ್ ರೋಸ್‌ ದಿನ ಒಂದಕ್ಕೆ ಕ್ವಿಂಟಲ್‌ಗಟ್ಟಲೇ ಬರುವ ಸಂಭವವಿದೆ.

ದೀಪಾವಳಿ, ದಸರಾ, ಗೌರಿ ಹುಣ್ಣಿಮೆ ಮತ್ತು ತುಳಸಿ ವಿವಾಹದಂಥ ಸಂದರ್ಭದಲ್ಲಿ ಬಟನ್ ರೋಸ್‌ ಬೆಲೆ ನೂರು ದಾಟಿದ್ದು ಇದೆ. ಉಳಿದಂತೆ ಪ್ರತಿನಿತ್ಯ ₹50 ರಿಂದ ₹100 ರವರೆಗೂ ಬೆಲೆ ಸಿಗುತ್ತದೆ. ದಿನಕ್ಕೆ ಎರಡು ಬಾರಿ ಬಟನ್ ರೋಸ್ ಕಟ್ ಮಾಡಿ ಮಾರುಕಟ್ಟೆಗೆ ತರಲಾಗುತ್ತಿದೆ.

ಕಡಿಮೆಯಂದರೂ ₹50 ಬೆಲೆ ಸಿಗುತ್ತದೆ.

ಈಗಾಗಿ ತಮಗೆ ದಿನನಿತ್ಯ ಹಣ ಕೈಯಲ್ಲಿರುವ ಕಾರಣ ಬಟನ್ ರೋಸ್‌ ನಮಗೆ ಎಟಿಎಂ ಇದ್ದಂತೆ ಎನ್ನುತ್ತಾರೆ ರೈತ ದೇವೇಂದ್ರಪ್ಪ.

ಜಾನುವಾರುಗಳನ್ನು ಸಾಕಿ ಹಾಲಿನ ಡೈರಿಗೆ ಹಾಕಿ ಹಣ ಪಡೆದಂತೆ ನಾನು ಬಟನ್ ರೋಸ್ ಮಾರಿ ಹಣ ಪಡೆಯುತ್ತಿದ್ದೇನೆ ಎನ್ನುತ್ತಾರೆ.

ಬಟನ್ ರೋಸ್ ಒಂದು ಬಾರಿ ಹಚ್ಚಿದರೇ ಸಾಕು. ಸರಿಯಾಗಿ ನಿರ್ವಹಣೆ ಮಾಡಿದರೆ 10 ವರ್ಷಗಳ ಕಾಲ ಆದಾಯ ಬರುತ್ತದೆ.

ಇನ್ನು ಹುಣ್ಣಿಮೆ ಅಮವಾಸ್ಯೆಗಳಂದು ಸಹ ಬಟನ್ ರೋಸ್‌ಗೆ ಬೇಡಿಕೆ ಬರುತ್ತದೆ. ಸದ್ಯ ಯಲಬುರ್ಗಾ ಹಾಗೂ ಕುಕನೂರು ಮಾರುಕಟ್ಟೆಯಲ್ಲಿ ಮಾರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಉದ್ದೇಶವಿದೆ ಎಂದು ದೇವೇಂದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT