ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ರಂಜಾನ್ ಆಚರಣೆ

Last Updated 26 ಮೇ 2020, 2:14 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಮುಸ್ಲಿಮರು ಈದ್ ಉಲ್ ಫಿತ್ರ್‌ ಹಬ್ಬವನ್ನು ಮನೆ ಹಾಗೂ ವಿವಿಧ ಮಸೀದಿಗಳಲ್ಲಿ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಜಾಮಿಯಾ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಮಸೀದಿಯ ಸಹಾಯಕ ಇಮಾಮ್ ಚಂದುಸಾಬ ಸೂಳೇಕಲ್ ಮಾತನಾಡಿ, ಜಾತಿ, ಧರ್ಮ, ಭಾಷೆ, ವರ್ಣಗಳ ಆಧಾರದ ಮೇಲೆ ತಾರತಮ್ಯ ಮಾಡುವುದು ಮಾನವ ಧರ್ಮದ ಲಕ್ಷಣ ಅಲ್ಲ. ಯಾರೂ ಕೂಡ ಜಾತಿ ಭೇದ ಮಾಡಬಾರದು ಎಂದು ತಿಳಿಸಿದರು.

ಸಮಾಜದಲ್ಲಿರುವ ಶೋಷಿತರು, ಬಡವರು, ಅಸಹಾಯಲರು ಹಾಗೂ ದುರ್ಬಲ ವರ್ಗದವರ ಸಂಕಷ್ಟ, ನೋವುಗಳಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕೆಂದು ಹೇಳಿದರು.

ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕೊರೊನಾ ಸೋಂಕು ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾನಿ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಆಫೀಜ್‌ ಫಕೃರುದ್ದೀನ ಬಡಿಗೇರ ಪ್ರಾರ್ಥನೆ ಮಾಡಿಸಿದರು. ‍ಪ್ರಮುಖರಾದ ಹೊನ್ನೂರುಸಾಬ ನಡಲಮನಿ, ಮೊಹ್ಮದ ಚಳ್ಳಮರದ, ಹುಸೇನಸಾಬ ತಾವರಗೇರಾ ಇದ್ದರು.

ರಾಜಾಸಾಬ ನಂದಾಪುರ ಅವರ ಮನೆಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಜಾಮಿಯಾ ಮಸೀದಿಯ ಧರ್ಮಗುರು ಮಹ್ಮದ ಸಜ್ಜಾದ ರಜಾ ನೂರಿ ಪ್ರಾರ್ಥನೆ ಮಾಡಿಸಿದರು. ಖಾಜಿ ಇಕ್ಬಾಲ್‌ಖಾನ, ಶಾಮೀದಸಾಬ ಲೈನದಾರ
ಇದ್ದರು.

ಬಹುತೇಕ ಮುಸ್ಲಿಮರ ಮನೆಗಳಲ್ಲಿಯೇ ಕುಟುಂಬದವರು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಮುಗಿದ ನಂತರ ಯುವಕರು ಪರಸ್ಪರರು ಆಲಿಂಗನ ಮಾಡಿಕೊಳ್ಳುವುದು, ಹಸ್ತಲಾಘವ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಪಟ್ಟಣದಲ್ಲಿ ಕಂಡು ಬಂತು.

ಸಮೀಪದ ಸೂಳೇಕಲ್, ಹುಲಿಹೈದರ, ನವಲಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT