ಕೊಪ್ಪಳ: ‘ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಿಗೆ ರೈತರು ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ’ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ 15,789 ರೈತರು ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸುವುದು ಬಾಕಿ ಇರುತ್ತದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್, ಬೆಳೆ ವಿಮೆ, ಬೆಳೆ ಪರಿಹಾರ, ಖರೀದಿ ಕೇಂದ್ರ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ರೈತರು ‘ಸೆಂಟ್ರಲ್ ಫಾರ್ಮರ್ ಐಡಿ’ ಮಾಡಿಕೊಳ್ಳುವುದು ಅಗತ್ಯವಿದ್ದು, ಕೊಪ್ಪಳ ತಾಲ್ಲೂಕಿನ ರೈತರು ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ಐಡಿಯನ್ನು ಮಾಡಿಸಬೇಕಿದೆ’ ಎಂದು ಹೇಳಿದ್ದಾರೆ.

ಐಡಿ ಮಾಡಿಸುವವರು ಮೊಬೈಲ್ ಸಂಖ್ಯೆ ನವೀಕರಣಗೊಳಿಸುವುದು, ಇ-ಕೆವೈಸಿ ಮಾಡಿಸುವುದು, ರೈತರಿಂದ ವಿದ್ಯುನ್ಮಾನ ಸಹಮತಿ ಪಡೆಯುವುದು ಹಾಗೂ ಭೂ ಘೋಷಣೆ ನಂಬರ್ಗಳನ್ನು ತಮ್ಮ ಎಫ್ಐಡಿಗೆ ಜೋಡಣೆ ಮಾಡುವುದುರಿಂದ ಎಲ್ಲಾ ರೈತರು ತಮ್ಮ ಎಲ್ಲಾ ಜಮೀನಿನ ವಿವರ ಹಾಗೂ ಆಧಾರ್ ಕಾರ್ಡ್ ದಾಖಲೆ ಜೊತೆ ಹತ್ತಿರದ ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆಗಳಿಗೆ ಅಥವಾ ಗ್ರಾಮ-1 ಕೇಂದ್ರಗಳಿಗೆ ಸಂಪರ್ಕಿಸಿವಂತೆ ಪ್ರಕಟಣೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.