ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಗ್ರಾಮ ಪುರಸ್ಕಾರ ಪಡೆದ ಊರಲ್ಲಿ ಅಸ್ವಚ್ಛತೆ

ಅಳವಂಡಿ ಬಸ್‌ ನಿಲ್ದಾಣದಲ್ಲಿ ಶೌಚಾಲಯದ ದುರ್ವಾಸನೆಗೆ ಮೂಗು ಮುಚ್ಚಿ ಕೂರುವ ಪ್ರಯಾಣಿಕರು
Last Updated 8 ನವೆಂಬರ್ 2019, 10:30 IST
ಅಕ್ಷರ ಗಾತ್ರ

ಅಳವಂಡಿ: ಸ್ವಚ್ಛ ಗ್ರಾಮ ಪುರಸ್ಕಾರ ಪಡೆದ ಅಳವಂಡಿ ಗ್ರಾಮದಲ್ಲಿ ಇಂದು ಸ್ವಚ್ಛತೆಯೇ ಇಲ್ಲದಂತಾಗಿದೆ. ಹೆಚ್ಚು ಸುಶಿಕ್ಷಿತರು ವಾಸಿಸುವ ಈ ಗ್ರಾಮವು ದುರ್ನಾತದ ಗೂಡಾಗಿದೆ.

ಗ್ರಾಮದಲ್ಲಿಸುಸಜ್ಜಿತ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿದೆ ಆದರೆ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ಮುಂಡರಗಿ, ಕೊಪ್ಪಳ, ಗದಗ, ಯಲಬುರ್ಗಾ ಭಾಗಕ್ಕೆ ಇಲ್ಲಿಂದ ಹೆಚ್ಚಿನ ಬಸ್‌ಗಳು ಸಂಚರಿಸುತ್ತಿದ್ದು, ದುರ್ವಾಸನೆಯ ನಡುವೆ ಬಸ್‌ ನಿಲ್ದಾಣದಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಪ್ರಯಾಣಿಕರದ್ದಾಗಿದೆ.

ಕವಲೂರು, ಹಲವಾಗಲಿ, ಮೋರ ನಾಳ ಹಾಗೂ ಇನ್ನಿತರ ಹಳ್ಳಿಗರಿಗೆ ವ್ಯಾಪಾರ-ವಹಿವಾಟಿಗೆ ಕೇಂದ್ರಸ್ಥಳ ಕೂಡಾ ಆಗಿದೆ.ಸ್ಥಳೀಯರಿಗೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಜನರಿಗೆ ಇಲ್ಲಿ ಮೂತ್ರ ವಿಸರ್ಜನೆ ಮಾಡಲು ಕೂಡಾ ಸ್ಥಳ ಹುಡು ಕಾಡುವಂತೆ ಆಗಿದೆ.

ಸಾರ್ವಜನಿಕ ಬಸ್ ನಿಲ್ದಾಣ ದಲ್ಲಿರುವ ಸಾರ್ವಜನಿಕ ಶೌಚಾಲಯ ಸರಿಯಾದ ನಿರ್ವಹಣೆಯಿಲ್ಲದೆ ಹಾಳುಬಿದ್ದಿವೆ. ಬಸ್ ನಿಲ್ದಾಣದಲ್ಲಿನ ಶೌಚಾಲಯ ಕಟ್ಟಡಗಳ ಸುತ್ತಮುತ್ತಲೆಲ್ಲ ಹುಲ್ಲು-ಮುಳ್ಳು ಗಿಡಗಂಟೆಗಳು ಬೆಳೆದುಕ್ಕೊಂಡಿದ್ದು ಅಸ್ತವ್ಯಸ್ತವಾಗಿದೆ. ಇನ್ನು ಪುರುಷರು ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಮೂತ್ರ ಮಾಡುತ್ತಿರುವುದು ಒಂದಡೆಯಾದರೆ, ಮಹಿಳೆಯರಿಗೆಸರಿಯಾದ ಜಾಗವಿಲ್ಲದೆ ಪರದಾಡುವಂತೆ ಆಗಿದೆ.

ಇದ್ದ ಒಂದು ಶೌಚಾಲಯ ನೀರಿಲ್ಲದೆ ಬಂದ್ ಆಗಿದ್ದರೆ, ಮೂತ್ರಾಲಯ ಗಬ್ಬೆದ್ದು ಹೋಗಿದೆ. ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರು ಮಹಿಳೆಯರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈಚೆಗೆ ನಿಲ್ದಾಣದಲ್ಲಿಯೇ ನಾಯಿಯೊಂದು ಸತ್ತು ಬಿದ್ದು ಗಬ್ಬು ನಾರುತ್ತಿದ್ದರೂ ಅದನ್ನು ತೆರವುಗೊಳಿಸಿಲ್ಲ. ಇದ ರಿಂದ ವಾತಾವರಣ ಇನ್ನಷ್ಟು ಅಸಹನೀಯ ಗೊಂಡಿದೆ.

ಬಸ್‌ ನಿಲ್ದಾಣದಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಇದ್ದರೂ ಪ್ರಯೋಜನವಾಗಿಲ್ಲ. ದ್ವಾರದ ಬಳಿಯೇ ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳನ್ನು ನಿಲ್ಲಿಸುವುದರಿಂದ ನಿತ್ಯ ಬಸ್‌ ಚಾಲಕರ ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ವಾಹನ ನಿಲುಗಡೆಗೆ ವ್ಯವಸ್ಥೆಯಿಲ್ಲದೆ ತೊಂದರೆಯಾಗಿದೆ.

'ಬಸ್ ನಿಲ್ದಾಣದಲ್ಲಿನ ಶೌಚಾಲಯ ಗಳು ಬಳಕೆಯಿಲ್ಲದೆ ಹಲವಾರು ವರ್ಷಗಳಿಂದ ಹಾಳು ಬಿದ್ದಿವೆ. ಇದರಿಂದ ನಿಲ್ದಾಣದ ಸುತ್ತಮುತ್ತಲಿನ ಹೊಟೇಲ್ ಹಾಗೂ ಚಹಾ ಅಂಗಡಿಗಳಲ್ಲಿ ಕೂತರೂ ವಾಸನೆ ಬರುತ್ತಿದೆ. ಯಾರಾದರು ಅಧಿಕಾರಿಗಳುಬರುತ್ತಾರೆ ಎಂದರೆ ಮಾತ್ರ ಸ್ವಚ್ಛಗೊಳಿಸುತ್ತಾರೆ. ಇದರ ಕುರಿತಾಗಿ ಸಂಬಂಧಿಸಿದ ಅಧಿಕಾರಿ ಗಳಿಗೆ ದೂರು ನೀಡಿದರೂ ಪ್ರಯೋಜನ ವಾಗಿಲ್ಲ' ಎನ್ನುತ್ತಾರೆ ಗ್ರಾಮದ ಯುವಕ ಮಂಜುನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT