ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ-ಗುಂತಕಲ್ ವಿದ್ಯುತ್ ರೈಲು ಮಾರ್ಗಕ್ಕೆ ವೇಗ

ಜೋಡಿ ಹಳಿ ಕಾಮಗಾರಿ ಅಂತಿಮ ಹಂತಕ್ಕೆ: ವಿದ್ಯುತ್ ಸಂಪರ್ಕ ಬಾಕಿ
Last Updated 7 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಕೊಪ್ಪಳ: ಈ ಭಾಗದ ಬಹು ನಿರೀಕ್ಷಿತ ಗೋವಾ ಮತ್ತು ಗುಂತಕಲ್ ಮಧ್ಯೆ ವಿದ್ಯುತ್ ಚಾಲಿತ ರೈಲು ಓಡಿಸಲು ಸಿದ್ಧತೆ ನಡೆದಿದ್ದು, ಗುಂತಕಲ್‌ದಿಂದ ಕೊಪ್ಪಳದವರೆಗೆ ವಿದ್ಯುತ್ ಕಂಬ ಅಳವಡಿಸುವ ಕಾರ್ಯ ವೇಗದಿಂದ ನಡೆಯುತ್ತಿದೆ.

ಗೋವಾದ ವಾಸ್ಕೋ-ಡ-ಗಾಮಾ ರೈಲು ನಿಲ್ದಾಣದಿಂದ ಆಂಧ್ರಪ್ರದೇಶದ ಗುಂತಕಲ್‌ವರೆಗೆ ಜೋಡಿ ರೈಲು ಹಳಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ ಗುಂತಕಲ್‌ನಿಂದವಿದ್ಯುತ್ ರೈಲು ಓಡುತ್ತಿದ್ದು, ಕರ್ನಾಟಕದಲ್ಲಿ ಬಳ್ಳಾರಿಯಿಂದ ಈ ಕಾಮಗಾರಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿ ಹಣ ಮಂಜೂರು ಮಾಡಿದೆ.

ಬಳ್ಳಾರಿ-ಹೊಸಪೇಟೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಹೊಸಪೇಟೆ- ಕೊಪ್ಪಳ ಮಧ್ಯೆ ಕಾಮಗಾರಿ ಜನವರಿಯಲ್ಲಿ ಅಂತ್ಯಗೊಳ್ಳಲಿದ್ದು, ರೈಲ್ವೆ ಇಲಾಖೆ ಮಾರ್ಚ್ ಅಂತ್ಯದಿಂದ ಕೊಪ್ಪಳದಿಂದ ಗುಂತಕಲ್‌ವರೆಗೆ ವಿದ್ಯುತ್ ರೈಲು ಓಡಿಸಬಹುದಾಗಿದೆ ಎನ್ನಲಾಗಿದೆ.

2021ರ ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗುತ್ತದೆ. 2019 ಅಂತ್ಯಕ್ಕೆ ಹುಬ್ಬಳ್ಳಿವರೆಗೆ ತಲುಪಲಿರುವ ಕಾಮಗಾರಿ ಅಲ್ಲಿಂದ ನಿತ್ಯ ಹೊರಡುವ ಅನೇಕ ರೈಲುಗಳಿಂದ ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

2013-14ನೇ ಸಾಲಿನಲ್ಲಿ ಒಟ್ಟು 480 ಕಿ.ಮೀ. ಉದ್ದದ ಹಳಿಗುಂಟ ₹ 750 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಹಂತ, ಹಂತವಾಗಿ ಬಿಡುಗಡೆಯಾದ ಅನುದಾನ ಆಧರಿಸಿ ಇದೀಗ ಹಳಿಗುಂಟ ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿ ಕೊಪ್ಪಳ ತಲುಪಿದೆ.

ರೈಲ್ವೆ ವಿಕಾಸ ನಿಗಮ ಲಿಮಿಟೆಡ್‍ನವರು ಈ ಕಾಮಗಾರಿ ಕೈಗೊಂಡಿದ್ದು,ಬರುವ ಲೋಕಸಭಾ ಚುನಾವಣೆ ಅವಧಿ ಮುಗಿಯುವ ವೇಳೆಗೆ ಉತ್ತರ ಕರ್ನಾಟಕ ಭಾಗದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತದೆ.

ಅನುಕೂಲವೇನು?: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ತಿರುಪತಿ, ವಿಜಯವಾಡ, ಹೈದರಾಬಾದ್‌ಗೆ ತೆರಳುತ್ತಿದ್ದು, ಡಿಸೇಲ್‌ ಎಂಜಿನ್ ಹೊಂದಿರುವ ರೈಲುಗಳಿಗಿಂತ ವೇಗವಾಗಿ ವಿದ್ಯುತ್ ಚಾಲಿತ ರೈಲುಗಳು ಪ್ರಯಾಣಿಸುವುದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ.

ವಿದ್ಯುತ್ ರೈಲು ಚಲಿಸುವುದರಿಂದ ಡಿಸೇಲ್ ಎಂಜಿನ್‍ನಿಂದ ಹೊರಸೂಸುವ ಯೇತೇಚ್ಛ ಹೊಗೆಯಿಂದ ವಾಯು ಮಾಲಿನ್ಯವಾಗುತ್ತಿದೆ. ಇದರ ಜೊತೆಗೆ ಶಬ್ದ ಮಾಲಿನ್ಯ ಕೂಡ ಕೊಂಚ ತಗ್ಗುತ್ತದೆ.ಆಧುನೀಕರಣ ದೃಷ್ಟಿಯಿಂದ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಕರ್ಯಗಳನ್ನು ಒದಗಿಸುವ ಯೋಜನೆ ರೈಲ್ವೆ ಇಲಾಖೆಗೆ ಇದೆ.

ಜೋಡಿ ಹಳಿಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದ ಕಾರಣ ರೈಲುಗಳಿಗೆ ಕ್ರಾಸಿಂಗ್ ಸಮಸ್ಯೆ ಇರುವುದಿಲ್ಲ. ಶೀಘ್ರ ರೈಲು ಸೇವೆ ಈ ಭಾಗದ ಜನರಿಗೆ ದೊರೆತರೆ ಪ್ರಯಾಣ ಅಷ್ಟೊಂದು ಪ್ರಯಾಸವಾಗುವುದಿಲ್ಲ ಎನ್ನಲಾಗುತ್ತದೆ.

ಯೋಜನೆ ವಿವರ
ಯೋಜನೆ ಘೋಷಣೆ- 2013-14ರಲ್ಲಿ
ಒಟ್ಟು ಅಂತರ- 480 ಕಿಮೀ
ಒಟ್ಟು ಅನುದಾನ- ₹ 750 ಕೋಟಿ
ಎಲ್ಲಿಂದ ಎಲ್ಲಿಗೆ- ಗುಂತಕಲ್-ಗೋವಾ
ಯೋಜನೆ ಅಂತ್ಯ- 2021ರ ಮಾರ್ಚ್‍ಗೆ
ಹೊಸಪೇಟೆ-ಕೊಪ್ಪಳ- 2019ರ ಮಾರ್ಚ್ ಅಂತ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT