ಕನಕಗಿರಿ: ಇಲ್ಲಿನ ಸೂಳೇಕಲ್ ಓಣಿಯ ಕೂಲಿ ಕಾರ್ಮಿಕ ಮೌಲಸಾಬ ಮೋದಿನಸಾಬ ಬಡಿಗೇರ ಅವರ ಪುತ್ರಿ ದೌಲತ್ ಬಾನು ಅವರು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಸದ್ಯ ಸಿರಗುಪ್ಪ ತಾಲ್ಲೂಕಿನ ಉಡೇಗೋಳ ಗ್ರಾಮದಲ್ಲಿ ವಾಸಿಸುತ್ತಿರುವ ದೌಲತ್ ಬಾನು ಅವರಿಗೆ ಈಚೆಗೆ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ.
ತಂದೆ–ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ದೌಲತ ಬಾನು ಅವರ ಚಿಕ್ಕಪ್ಪ ಕುಷ್ಟಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ದಸ್ತಗೀರಸಾಬ ಬಡಿಗೇರ ಅವರು ದೌಲತ ಬಾನು ಅವರ ಶಿಕ್ಷಣಕ್ಕೆ ನೆರವಾಗಿದ್ದಾರೆ.