ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ

Published 5 ಜೂನ್ 2024, 16:10 IST
Last Updated 5 ಜೂನ್ 2024, 16:10 IST
ಅಕ್ಷರ ಗಾತ್ರ

ಕುಕನೂರು: ರೈತರು ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ನ್ಯಾನೋ ಡಿಎಪಿ ಮತ್ತು ನ್ಯಾನೋ ಯೂರಿಯಾಗಳನ್ನು ಬಳಸಿ ಎಂದು ಆರ್‌ಡಿಸಿಸಿ ನಿರ್ದೇಶಕ ಬಸವರಾಜ ಗೌರಾ ಹೇಳಿದರು.

ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಿಯಾಯಿತಿ ದರದಲ್ಲಿ ಬೀಜ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿತ್ತನೆ ವೇಳೆ ಪ್ರತಿ ಕೆ.ಜಿಗೆ 4 ಎಂ.ಎಲ್ ನ್ಯಾನೊ ಡಿಎಪಿಯಿಂದ ಉಪಚರಿಸಬೇಕು. 15 ರಿಂದ 20 ದಿನ ಇರುವಾಗ ಪ್ರತಿ ಎಕರೆಗೆ 500 ಎಂ.ಎಲ್ ನ್ಯಾನೊ ಡಿಎಪಿ ಸಿಂಪರಣೆ ಮಾಡಬೇಕು ಎಂದರು.

ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಸರ್ಕಾರ ರಿಯಾಯಿತಿ ದರದಲ್ಲಿ ರೈತರಿಗೆ ಬೀಜಗಳನ್ನು ವಿತರಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇಸ್ಕೊ ಸಂಸ್ಥೆಯವರು ಡ್ರೋನ್ ಮೂಲಕ ನ್ಯಾನೋ ಗೊಬ್ಬರ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಸಿದರು.

ಇಸ್ಕೊ ಸಂಸ್ಥೆಯ ಅಧಿಕಾರಿ ರಾಘವೇಂದ್ರ, ಪ್ರಭುರಾಜ್ ಪಾಟೀಲ, ಮಲ್ಲಪ್ಪ ಸುಳ್ಳದ, ಬಸವರಾಜ್ ಬನ್ನಿಕೊಪ್ಪ, ಹನುಮಪ್ಪ ದೇವರಮನಿ, ಬಸಯ್ಯ ಸಾಲಿಮಠ, ರಾಮಣ್ಣ ಚೆನ್ನಪ್ಪನಹಳ್ಳಿ, ಹನುಮಂತ್ ಬನ್ನಿಕೊಪ್ಪ, ಪ್ರಭಾಕರ್ ಆಚಾರ್, ನಾಗರಾಜ್ ಗಿರೆಡ್ಡಿ, ದೇವಪ್ಪ, ಈಶಪ್ಪ ಅಂಗಡಿ, ಕಪತಪ್ಪ ಅಂಗಡಿ, ಹನುಮರೆಡ್ಡಿ ಮೂಲಿಮನಿ, ನಿಂಗಪ್ಪ ಗೋಡಿಕಾರ, ಬಸವರಾಜ್ ತೆರಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT