ಮಂಗಳವಾರ, ಅಕ್ಟೋಬರ್ 27, 2020
22 °C

ಅಮೆರಿಕ ಕನ್ನಡ ಅಕಾಡೆಮಿಗೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ 30 ದೇಶಗಳಲ್ಲಿ ಕನ್ನಡ ನಾಡು, ನುಡಿ, ಶಿಕ್ಷಣ ಮತ್ತು ಪ್ರಚಾರ ಕೆಲಸ ಮಾಡುತ್ತಿರುವ ಅಮೆರಿಕ ಮೂಲದ ‘ಕನ್ನಡ ಅಕಾಡೆಮಿ’ ಕೇಂದ್ರ ಸಮಿತಿಗೆ ಸದಸ್ಯ ಹಾಗೂ ಮಾರ್ಗದರ್ಶಕರಾಗಿ ಜಿಲ್ಲೆಯ ಡಾ.ಉದಯಶಂಕರ ಪುರಾಣಿಕ ಅವರನ್ನು ನೇಮಕ ಮಾಡಿದೆ.

ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಾಹಿತಿ ಅನ್ನದಾನಯ್ಯ ಪುರಾಣಿಕ, ನೀಲಾಂಬಿಕೆ ಪುರಾಣಿಕ ಅವರ ಪುತ್ರ ಉದಯಶಂಕರ ಪುರಾಣಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಆನಂದಕಂದ ಡಾ.ಸಿದ್ಧಯ್ಯ ಪುರಾಣಿಕ, ಕಲ್ಲಿನಾಥ ಶಾಸ್ತ್ರಿ ಇವರ ದೊಡ್ಡಪ್ಪನವರು.

ಕೇಂದ್ರ ಸರ್ಕಾರದ ಅಟಲ್‌ ಇನ್ನೋವೇಶನ್ ಸಂಸ್ಥೆಯ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಆವಿಷ್ಕಾರ ಮಾಡಿದ ಕೋಲ್ಡ್‌ ಸ್ಟೋರೇಜ್‌ ತಂತ್ರಜ್ಞಾನ ಎಲ್ಲ ಹಸ್ತಪ್ರತಿ ವಸ್ತುಸಂಗ್ರಹಾಲಯಗಳಲ್ಲಿ ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಇವರ ನೇಮಕದಿಂದ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.