ಕುಷ್ಟಗಿ: ಪಟ್ಟಣದ 23ನೇ ವಾರ್ಡಿನಲ್ಲಿರುವ ತೆಗ್ಗಿನ ಓಣಿಯಲ್ಲಿನ ಚರಂಡಿಗಳು ಭರ್ತಿಯಾಗಿದ್ದು ಮಾಲಿನ್ಯ ಮಡುಗಟ್ಟಿದ್ದು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದರು.

ಅನೇಕ ತಿಂಗಳಾದರೂ ಚರಂಡಿಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಪುರಸಭೆ ನಿರ್ಲಕ್ಷ್ಯವಹಿಸಿದೆ. ಮಳೆಗಾಲದಲ್ಲಿ ಕೊಳಚೆ ಹರಿದುಹೋಗುತ್ತದೆ. ಆದರೆ ಈಗ ಚರಂಡಿಗಳಲ್ಲಿ ವಿವಿಧ ರೀತಿಯ ತ್ಯಾಜ್ಯ ಸಂಗ್ರಹವಾಗಿದ್ದರಿಂದ ಕೊಳಚೆ ಮುಂದಕ್ಕೆ ಹೋಗುತ್ತಿಲ್ಲ. ಇದರಿಂದ ಸುತ್ತಲಿನ ಪ್ರದೇಶದಲ್ಲಿನ ವಾತಾವರಣ ಹದಗೆಟ್ಟಿದೆ. ಪರಿಸರ ಮಾಲಿನ್ಯದಿಂದ ಜನರು ರೋಸಿಹೋಗಿದ್ದಾರೆ. ಸೊಳ್ಳೆಗಳ ಸಂತತಿ ಹೆಚ್ಚಿ ಜನರು, ಮಕ್ಕಳು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಜಮದಗ್ನಿ ಗುರಿಕಾರ, ಮಹಾಂತಪ್ಪ, ಹನುಮಂತ ಇತರರು ಸಮಸ್ಯೆ ವಿವರಿಸಿದರು.

ಜನರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಯನ್ನು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನಾಗಿಲ್ಲ. ಬೇಜವಾಬ್ದಾರಿ ಇದೇ ರೀತಿ ಮುಂದುವರೆದರೆ ವಾರ್ಡಿನ ಜನರು ಪುರಸಭೆ ಮುಂದೆ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.