ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪರೀಕ್ಷೆ: ಮೂವರು ವಿದ್ಯಾರ್ಥಿಗಳಿಗೆ 20 ಸಿಬ್ಬಂದಿ!

Published 21 ಮಾರ್ಚ್ 2024, 16:27 IST
Last Updated 21 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾದ್ಯಂತ ಪದವಿಪೂರ್ವ ಕಾಲೇಜುಗಳ ದ್ವಿತೀಯ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದು, ಗುರುವಾರ ನಡೆದ ಪರೀಕ್ಷಾ ಕೇಂದ್ರವೊಂದರಲ್ಲಿ ಮೂವರು ವಿದ್ಯಾರ್ಥಿಗಳಿಗೆ 20 ಜನ ಸಿಬ್ಬಂದಿ ಕೆಲಸ ಮಾಡಿದರು.

ಇಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉರ್ದು ಮತ್ತು ಸಂಸ್ಕೃತ ವಿಷಯಗಳ ಪರೀಕ್ಷೆಯಿತ್ತು. ಈ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ಎಲ್ಲ ಮೂವರು ವಿದ್ಯಾರ್ಥಿಗಳು ಹಾಜರಾಗಿದ್ದರು. ಕೇಂದ್ರದ ಮುಖ್ಯ ಪಾಲಕ, ಜಂಟಿ ಅಧೀಕ್ಷಕ, ಕಚೇರಿ ಸೂಪರಿಟೆಂಡೆಂಟ್‌, ಉತ್ತರ ಪತ್ರಿಕೆ ಪಾಲಕರು, ಕಚೇರಿ ಸಹಾಯಕ, ಟೈಪಿಸ್ಟ್, ಜಾಗೃತದಳ ಸಿಬ್ಬಂದಿ, ಗ್ರೂಪ್ ಡಿ ಹೀಗೆ ಒಟ್ಟು 20 ಜನ ಕೆಲಸ ನಿರ್ವಹಿಸಿದರು.

‘ಪರೀಕ್ಷಾ ಕೇಂದ್ರದಲ್ಲಿ ಎಷ್ಟೇ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ನಿಯೋಜಿತ ಪೂರ್ಣ ಸಿಬ್ಬಂದಿ ಕೆಲಸ ಮಾಡಬೇಕು ಎನ್ನುವ ನಿಯಮವಿದೆ. ಹೀಗಾಗಿ ಅಷ್ಟೊಂದು ಸಂಖ್ಯೆಯಲ್ಲಿ ಸಿಬ್ಬಂದಿ ಕೆಲಸ ಮಾಡಿದ್ದಾರೆ’ ಎಂದು ಡಿಡಿಪಿಯು ಜಗದೀಶ್‌ ಎಚ್‌.ಎಸ್‌. ಹೇಳಿದರು. ಸಂಸ್ಕೃತ ಮತ್ತು ಉರ್ದು ಪರೀಕ್ಷೆಗೆ 561 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇಬ್ಬರು ಮಾತ್ರ ಗೈರಾಗಿದ್ದರು. ಶುಕ್ರವಾರ ಹಿಂದಿ ವಿಷಯದ ಪರೀಕ್ಷೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT