ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ತ್ಯಾಗ, ದಾನದಿಂದ ಜೀವನ ಸಾರ್ಥಕ

ಈದ್ ಉಲ್‌ ಫಿತ್ರ್‌: ಮುಕ್ತಿ ಅತ್ತಖುಲ್‌ ರೆಹಮಾನಸಾಬ್ ಹೇಳಿಕೆ
Last Updated 3 ಮೇ 2022, 13:04 IST
ಅಕ್ಷರ ಗಾತ್ರ

ಕಾರಟಗಿ: ‘ಈದ್‌ ಮುಸ್ಲಿಮರಿಗೆ ಪವಿತ್ರ ಹಬ್ಬ. ತಿಂಗಳವರೆಗೆ ಉಪವಾಸ, ನಿತ್ಯ ಪ್ರಾರ್ಥನೆ ಹಾಗೂ ದಾನ, ತ್ಯಾಗದಿಂದ ಜೀವನ ಸಾರ್ಥಕವಾಗುತ್ತದೆ’ ಎಂದು ಕೊಪ್ಪಳದ ಧರ್ಮಗುರು ಮುಕ್ತಿ ಅತ್ತಖುಲ್‌ ರೆಹಮಾನಸಾಬ್ ಹೇಳಿದರು.

ಈದ್‌ ಉಲ್‌ ಫಿತ್ರ್‌ ‍ಪ್ರಯುಕ್ತ ಇಲ್ಲಿನ ವಲಿಸಾಹೇಬ್ ದರ್ಗಾದ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಮುಸ್ಲಿಂ ಸಮುದಾಯದವರಿಗೆ ಅನೇಕ ಪವಿತ್ರ ಹಬ್ಬಗಳಿವೆ. ಬಸವ ಜಯಂತಿ, ಈದ್‌ ಒಂದೇ ದಿನ ಬಂದಿದೆ. ಎರಡೂ ಹಬ್ಬಗಳು ಶಾಂತಿ, ಸೌಹಾರ್ದತೆಯಿಂದ ನಡೆದಿರುವುದು ಸಾಮರಸ್ಯದ ಪ್ರತೀಕ’ ಎಂದರು.

ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆಗೂ ಮುಂಚೆ ಬಡವರಿಗೆ ಹಾಗೂ ಅಸಹಾಯಕರಿಗೆ ನಗದು, ದವಸ–ಧಾನ್ಯ ದಾನ ಮಾಡಿದರು.

ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಬಾಬುಸಾಬ ಬಳಿಗೇರ ಮಾತನಾಡಿದರು.

ಬಳಿಕ ಪರಸ್ಪರ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಆತ್ಮೀಯರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ ಮುಸ್ಲಿಂ ಸಮಾಜದವರು ಸಿಹಿ, ಮಾಂಸದ ಊಟ ನೀಡಿ ಸತ್ಕರಿಸಿದರು.

ಪಟ್ಟಣದ ಐದು ಮಸೀದಿಗಳಲ್ಲಿ ತಿಂಗಳ ಪರ್ಯಂತ ಉಪವಾಸ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಸಂದರ್ಭದಲ್ಲಿ ಪಟ್ಟಣದ ಅನೇಕರು ಇಫ್ತಿಯಾರ್‌ ಕೂಟ ನಡೆಸಿ, ಮಾನವೀಯತೆ ಮೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT