ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಪರೀಕ್ಷಾ ಕೇಂದ್ರದ ಗೊಂದಲ: ಪೊಲೀಸ್ ಅಭ್ಯರ್ಥಿಗಳ ಅಲೆದಾಟ

Published 10 ಡಿಸೆಂಬರ್ 2023, 6:43 IST
Last Updated 10 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ಕೊಪ್ಪಳ: ನಗರದಲ್ಲಿ ಭಾನುವಾರ ಆಯೋಜನೆಯಾಗಿದ್ದ ಪೊಲೀಸ್ ನೇಮಕದ ಪರೀಕ್ಷೆಗೆ ಕೇಂದ್ರದ ಗೊಂದಲದಿಂದಾಗಿ ಅಭ್ಯರ್ಥಿಗಳು ಪರದಾಡಬೇಕಾಯಿತು.

ಅಭ್ಯರ್ಥಿಗಳಿಗೆ ನೀಡಿದ ಮಾಹಿತಿಯಂತೆ ಇಲ್ಲಿನ ಚುಕ್ಕನಕಲ್ ರಸ್ತೆಯಲ್ಲಿರುವ

ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹೊಸ ಪ್ರೌಢಶಾಲೆಯಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಅದರೆ ಪೊಲೀಸ್ ಇಲಾಖೆಯವರು ಲಯನ್ಸ್ ಸಂಸ್ಥೆಯ ಹಳೇ ಶಾಲೆಯಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು‌. ಹಳೇ ಶಾಲೆಯಲ್ಲಿ 240 ಅಭ್ಯರ್ಥಿಗಳಿಗೆ ನೋಂದಣಿ ಸಂಖ್ಯೆಯನ್ನೂ ಹಾಕಲಾಗಿತ್ತು.

ಮೊದಲು ಕೆಲವು ಅಭ್ಯರ್ಥಿಗಳು ಹೊಸ ಶಾಲೆಗೆ ಹೋಗಿದ್ದರು. ಹಳೇ ಶಾಲೆಯಲ್ಲಿ ಪೊಲೀಸ್ ಪರೀಕ್ಷೆಯಿದೆ ಎಂದು ವಾಪಸ್ ಕಳಿಸಿದ್ದರಿಂದ ಅಭ್ಯರ್ಥಿಗಳು ನಗರದಲ್ಲಿರುವ ಹಳೇ ಶಾಲೆಗೆ ಬಂದರು. ಇದರಿಂದ ಪೊಲೀಸರೇ ಗೊಂದಲಕ್ಕೆ ಒಳಗಾಗಿ ಅಂತಿಮವಾಗಿ ಮೂಲದಲ್ಲಿ ನಿಗದಿಯಾದಂತೆ ನಗರದಿಂದ ಹೊರವಲಯದಲ್ಲಿರುವ ಶಾಲೆಯಲ್ಲಿ ತರಾತುರಿಯಲ್ಲಿ ನೋಂದಣಿ ಸಂಖ್ಯೆ ಹಾಕಿ ಪರೀಕ್ಷೆ ಆರಂಭಿಸಲಾಯಿತು.

ಪರೀಕ್ಷೆ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಬಹುತೇಕ ಅಭ್ಯರ್ಥಿಗಳು ಎರಡು ತಾಸು ಮೊದಲೇ ‌ಬಂದಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಯಿತು.

ಎನಿದು ಪರೀಕ್ಷೆ: 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ ಸ್ಟೆಬಲ್ (ಸಿವಿಲ್), ಸೇವಾನಿರತ ಬ್ಯಾಕ್‌ಲಾಗ್-454 ಹುದ್ದೆಗಳ ನೇಮಕಾತಿ ಸಂಬಂಧ ಪರೀಕ್ಷೆ ನಡೆಯುತ್ತಿದೆ.

ನಗರದ ಕಾಳಿದಾಸ ಪ್ರೌಢಶಾಲೆ, ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ನ್ಯೂ ಎಕ್ಸ್ ಲೆಂಟ್ ಪಬ್ಲಿಕ್ ಶಾಲೆ, ನಿವೇದಿತಾ ಪ್ರಾಥಮಿಕ ಮತ್ತು ಪ್ರೌಢಶಾಲೆ, ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಗವಿಸಿದ್ದೇಶ್ವರ ಕಾಂಪೋಸಿಟ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ 2360 ಅಭ್ಯರ್ಥಿಗಳು ಪರೀಕ್ಷೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT