ಗುರುವಾರ , ಸೆಪ್ಟೆಂಬರ್ 29, 2022
26 °C

ಹಳ್ಳದಲ್ಲಿ ಸಿಲುಕಿದ ರೈತರು: ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿರುವ ಕಾರಣ 
ಕೋಳೂರು ಬಳಿ‌ ಹಳ್ಳದಲ್ಲಿ ಐದು ಜನ ರೈತರು ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗೆ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಹಾಂತೇಶ ಡೊಳ್ಳಿನ, ರಮೇಶ ಡೊಳ್ಳಿನ, ಬಸವರಾಜ ಗೊಂದಿಹೊಸಳ್ಳಿ, ಬಸವರಾಜ ಹುಯಿಲಗೋಳ ಹಾಗೂ ಕೆಂಚಪ್ಪ ಕುರಬರ ಎಂಬುವವರು ಹಳ್ಳದಲ್ಲಿ ಸಿಲುಕಿಕೊಂಡವರು. 

ಹಳ್ಳದ ದಡದಲ್ಲಿರುವ ಕೃಷಿ ಪಂಪ್ ಸೆಟ್ ತೆಗೆದುಕೊಳ್ಳಲು ಹೋಗಿದ್ದರು. ಆಗ ಹಳ್ಳಕ್ಕೆ ಏಕಾಏಕಿ ನೀರು ಬಿಡಲಾಗಿದೆ. ವಾಪಸ್ ದಡಕ್ಕೆ ಬರಲಾಗದೆ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.