ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆಗಳ ರಕ್ಷಣೆಗೆ ಬದ್ಧ

ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿಕೆ
Last Updated 3 ಏಪ್ರಿಲ್ 2021, 3:54 IST
ಅಕ್ಷರ ಗಾತ್ರ

ಕೊಪ್ಪಳ: ‘ರಾಜ್ಯದಲ್ಲಿ ಜಾನಪದ ಕಲೆ, ಕಲಾವಿದರು ಮತ್ತು ಜನಪದರನ್ನು ಉಳಿಸಲು ಪರಿಷತ್ ಬದ್ಧವಾಗಿದೆ‘ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.

ಅವರು ನಗರದ ಸಿಪಿಎಸ್ ಶಾಲೆಯಲ್ಲಿತಾಲ್ಲೂಕು ಕನ್ನಡ ಜಾನಪದ ಪರಿಷತ್ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಕಂಜರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಜಾನಪದ ಎಂದರೆ ಕೇವಲ ಸಂಗೀತವಲ್ಲ. ಅದರಲ್ಲಿ ಕಾವ್ಯ, ಗಾಯನ, ನೀತಿ, ಆಹಾರ, ಆರೋಗ್ಯ, ಕ್ರೀಡೆಯ ಜೊತೆಗೆ ನೈತಿಕ ಮೌಲ್ಯ ಒಳಗೊಂಡಿದೆ. ಸರ್ಕಾರ ಅಗತ್ಯಕ್ಕೆ ತಕ್ಕಷ್ಟು ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಜನಪದರಿಗೆ ₹ 5ಸಾವಿರ ಮಾಸಾಶನ ನೀಡಬೇಕು‘ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೊಂಡಬಾಳ, ‘ವಿಕಾಸಕ್ಕಾಗಿ ಜಾನಪದ ಹೆಸರಲ್ಲಿ ಪ್ರತಿ ಶಾಲೆಯಲ್ಲಿ ಜನಪದ ಕಲೆಗಳ ಕುರಿತು ಅರಿವು ಮೂಡಿಸುವ, ಕಲಿಸುವ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ‘ ಎಂದು ಅವರು ಹೇಳಿದರು.

ಉಮೇಶ ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಅಧ್ಯಕ್ಷ ಹನುಮಂತಪ್ಪ ಕುರಿ ತಮ್ಮ ಜವಾಬ್ದಾರಿ ಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದಾಗಿ ಹೇಳಿದರು. ಅಲ್ಲದೇ ಪ್ರತಿ ಶನಿವಾರ ಒಂದು ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು.

ಕಾಶೀನಾಥ ಸಿರಿಗೇರಿ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಬಾಲನಾಗಮ್ಮ, ಬಿಆರ್‌ಪಿಶರಣಪ್ಪ ರಡ್ಡೇರ್, ಮಂಜುನಾಥ ಪೂಜಾರ, ಪೂರ್ಣಿಮಾ ಪಟ್ಟಣಶೆಟ್ಟಿ, ಅಣ್ಣಪ್ಪ ಹಳ್ಳಿ, ಫರೀದಾ ಬೇಗಂ, ಕೊಟ್ರೇಶ್ ಚನ್ನಳ್ಳಿ, ರಾಮು ಪೂಜಾರ ಇದ್ದರು.

ನೂತನ ಪದಾದಿಕಾರಿಗಳಿಗೆನೇಮಿಸಿ ಪದಗ್ರಹಣ ನೀಡಲಾಯಿತು. ಭಾರತಿ ಹವಳೆ ಪ್ರಾರ್ಥಿಸಿದರು.

ಪದಾಧಿಕಾರಿಗಳು: ಹನುಮಂತಪ್ಪ ಕುರಿ (ಅಧ್ಯಕ್ಷ), ಬೀರಪ್ಪ ಅಂಡಗಿ (ಗೌರವಾಧ್ಯಕ್ಷ), ಬಾಲನಾಗಮ್ಮ.ಡಿ. (ಪ್ರಧಾನ ಕಾರ್ಯದರ್ಶಿ), ಶರಣಪ್ಪ ರಡ್ಡೇರ್ (ಖಜಾಂಚಿ), ಉದಯಕುಮಾರ್ (ಜಂಟಿ ಕಾರ್ಯದರ್ಶಿ), ಸುರೇಶ ಕಂಬಳಿ (ಪತ್ರಿಕಾ ಕಾರ್ಯದರ್ಶಿ), ಮಂಜುನಾಥ ಪೂಜಾರ್ (ಸಂಚಾಲಕರು), ಅಣ್ಣಪ್ಪ ಹಳ್ಳಿ (ಸಂಘಟನಾ ಕಾರ್ಯದರ್ಶಿ), ಭಾರತಿ ಹವಳೆ, ಪೂರ್ಣಿಮಾ ಪಟ್ಟಣಶೆಟ್ಟಿ, ಫರೀದಾ ಬೇಗಂ, ಮಲ್ಲಪ್ಪ ಜಿ., ರಮೇಶ ಬುಡ್ಡನಗೌಡರ, ಕೆ.ಎಂ.ಅಲಿ (ನಿರ್ದೇಶಕರು) ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT