ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮತ್ತೆ ನಾಲ್ಕು ಕೋವಿಡ್‌ ಸೋಂಕು ದೃಢ

ಜಿಲ್ಲೆಯಲ್ಲಿ 176 ಜನರ ಕ್ವಾರಂಟೈನ್‌
Last Updated 16 ಜೂನ್ 2020, 16:40 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ಕು ಕೋವಿಡ್‌ ಸೋಂಕು ಪ್ರಕರಣಗಳು ದಾಖಲಾಗಿವೆ.

ಕಾರಟಗಿ ತಾಲ್ಲೂಕಿನ ತಿಮ್ಮಾಪುರದಲ್ಲಿ ರೋಗಿ ಸಂಖ್ಯೆ– 5835 ನ ಪ್ರಾಥಮಿಕ ಸಂಪರ್ಕ ಹೊಂದಿದ್ದ 29 ವರ್ಷದ ಮಹಿಳೆಗೆ ಸೋಂಕು ಧೃಢಪಟ್ಟಿದೆ. ಗಂಗಾವತಿ ತಾಲ್ಲೂಕಿನಲ್ಲಿ ಮೂರು ಸೋಕಿನ ಪ್ರಕರಣಗಳು ಪತ್ತೆಯಾಗಿವೆ.

ಹೊರ ರಾಜ್ಯ ಹಾಗೂ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನಿಂದ ಆಗಮಿಸಿರುವ ಒಟ್ಟು 176 ಜನರನ್ನು ಜಿಲ್ಲಾಡಳಿತದಿಂದ ಈವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ 152, ರಾಜಸ್ಥಾನದ 8, ಗುಜರಾತಿನ 1 ಜಿಂದಾಲ್‌ನ 12 ಮತ್ತು ಪ್ರಾಥಮಿಕ ಸಂಪರ್ಕದಲ್ಲಿದ್ದ 3 ಜನ ಸೇರಿದಂತೆ 176 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕೊಪ್ಪಳ ನಗರದ ಹರ್ಷಾ ಇಂಟರ್‌ನ್ಯಾಷನಲ್‌ ಲಾಡ್ಜ್‌ನಲ್ಲಿ 9, ಲಕ್ಷ್ಮೀ ನಾರಾಯಣ ರೆಸಿಡೆನ್ಸಿಯಲ್ಲಿ 2 ಮತ್ತು ತಾಲ್ಲೂಕಿನ ಟಣಕನಕಲ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ಜನರನ್ನು ಪ್ರತ್ಯೇಕಿಸಿ ಇಡಲಾಗಿದೆ.

ಗಂಗಾವತಿ ತಾಲ್ಲೂಕಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 1, ಪಾರ್ಥ ಲಾಡ್ಜ್‌ನಲ್ಲಿ 10, ಬಸಾಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ 5 (3 ಪ್ರಾಥಮಿಕ ಸಂಪರ್ಕಿತರು), ಹೊಸಳ್ಳಿ ಬಿಸಿಎಂನಲ್ಲಿ 10, ಹೇಮಗುಡ್ಡದಲ್ಲಿ 20, ತಾಲ್ಲೂಕಿನ ಕನಕಗಿರಿಯಲ್ಲಿ 2, ಕುಷ್ಟಗಿಯ ಕಾಟಾಪುರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 17, ಯಲಬುರ್ಗಾದಲ್ಲಿ 6, ಕುದರಿಮೋತಿಯಲ್ಲಿ 4 ಹಾಗೂ ಕುಕನೂರಿನಮೊರಾರ್ಜಿ ದೇಸಾಯಿ ಶಾಲೆಯಲ್ಲಿ 75 ಜನ ಸೇರಿದಂತೆ ಒಟ್ಟು 176 ಜನರನ್ನು ದಿಗ್ಭಂಧನದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT