ಗ್ರಿಲ್‌ಗಳು ಸುಮಾರು ₹ ಲಕ್ಷ ಮೌಲ್ಯದ ಗ್ರಿಲ್‌ಗಳನ್ನು ವಶಪಡಿಸಿಕೊಂಡು, ಪಂಚಾಯಿತಿಯಲ್ಲಿ ಇಡಲಾಗಿದೆ. ಕಳೆದ 8 ವರ್ಷಗಳ ಸಾರ್ವಜನಿಕರ ಸುರಕ್ಷತೆಗಾಗಿ ಕೆಎನ್‌ಆರ್ ಕಂಪನಿಯವರು ಹೆದ್ದಾರಿಯ ಎರಡು ಬದಿಯಲ್ಲಿ ಗ್ರಿಲ್ ಅಳವಡಿಸಿದ್ದರು. ಅವುಗಳನ್ನು ಗ್ರಾಮದ ಕೆಲವರು, ಹಣಕ್ಕಾಗಿ ಮಾರಾಟ ಮಾಡಲು ಅಕ್ರಮವಾಗಿ ಕೊಂಡೊಯ್ದು ತಮ್ಮ ಮನೆಯ ಆವರಣ, ಚಾವಣಿ, ಮತ್ತು ಮನೆಯ ಹಿಂದೆ ಸಂಗ್ರಹಿಸಿದ್ದರು. ಗುಜರಿಯವರಿಗೆ ಮಾರಾಟಕ್ಕೆ ಇಟ್ಟಿದ್ದ ಒಟ್ಟು 25ಕ್ಕೂ ಹೆಚ್ಚು ಗ್ರಿಲ್‌ಗಳನ್ನು ಪಿಡಿಒ ಅಮರೇಶ ರಾಠೋಡ, ಕರ ವಸೂಲಿಗಾರ ನಾಗೇಶ ನಾಯಕ ಹಾಗೂ ತಂಡದವರು ಗ್ರಿಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.