ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಪ್ರಾಧಿಕಾರ; ರೆಡ್ಡಿ ಶ್ರೀನಿವಾಸ ಅಧ್ಯಕ್ಷ

Published : 14 ಮಾರ್ಚ್ 2024, 15:44 IST
Last Updated : 14 ಮಾರ್ಚ್ 2024, 15:44 IST
ಫಾಲೋ ಮಾಡಿ
Comments

ಕೊಪ್ಪಳ: ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ನೂತನ ಪದಾಧಿಕಾರಿಗಳನ್ನಾಗಿ ಮುಂದಿನೆ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಿ  ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಪ್ರಾಧಿಕಾರಕ್ಕೆ ಜಿಲ್ಲಾ ಅಧ್ಯಕ್ಷರನ್ನಾಗಿ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರಾಗಿ ಗಂಗಾವತಿಯ ಎಸ್.ಟಿ.ಖಾದ್ರಿ, ಹುಲಿಗಿಯ ಟಿ.ಜನಾರ್ದನ, ತಾವರಗೆರೆಯ ಚಂದ್ರಶೇಖರ ನಾಲತವಾಡ, ಕುಕನೂರಿನ ಖಾಸಿಂಸಾಬ್ ಮರ್ದಾನಸಾಬ್ ಹಾಗೂ ಕಾರಟಗಿಯ ನಾಗರಾಜ ಅರಳಿ ಅವರನ್ನು ನೇಮಿಸಲಾಗಿದೆ.

ಯಲಬುರ್ಗಾದ ಮಲ್ಲಪ್ಪ ಯಮನಪ್ಪ ಜಕಲಿ, ಮುನಿರಾಬಾದಿನ ಬಾಲಚಂದ್ರ ಸ್ಯಾಮುವೆಲ್, ಮರ್ಲಾನಹಳ್ಳಿಯ ಸೋಮನಾಥ ದೊಡ್ಡಮನಿ, ಹನುಮಸಾಗದ ಫಾರೂಖ್ ದಲಾಯತ್, ಕಾರಟಗಿಯ ಶಕುಂತಲಾ, ಕುಷ್ಟಗಿಯ ಶಾರದಾ ಕಟ್ಟಿಮನಿ, ಹನುಮಸಾಗರದ ಮೈನುದ್ದೀನ್ ಖಾಜಿ, ಕನಕಗಿರಿಯ ಹಜರತ್ ಹುಸೇನ್, ನಿಲೋಗಲ್‌ನ ಮಲ್ಲಪ್ಪ ಭಂಡಾರಿ, ಕೊರ್ಲಹಳ್ಳಿಯ ಸುಧೀರ್ ಶಾಮಾಚಾರ, ಗಂಗಾವತಿಯ ಆನಂದ ಹಾಸಲಕರ, ಬರಗೂರಿನ ದೇವಪ್ಪ ಬಾವಿಕಟ್ಟಿ, ಬಸವನದುರ್ಗಾದ ವೆಂಕಟೇಶ್ ಬಾಬು, ಕುಕನೂರಿನ ಸಂಗಪ್ಪ ವೀರಪ್ಪ ಗುತ್ತಿ ಮತ್ತು ಕೊಪ್ಪಳದ ನಗರಸಭೆ ಸದಸ್ಯೆ ಅಮ್ಜದ್‌ ಪಟೇಲ್ ಸದಸ್ಯರಾಗಿದ್ದಾರೆ.

 ಈ ಸಮಿತಿಯು ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗಳು ಹೇಗೆ ಅನುಷ್ಠಾನವಾಗಿವೆ. ಅರ್ಹ ಎಲ್ಲ ಫಲಾನುಭವಿಗಳಿಗೆ ಯೋಜನೆಯ ಲಾಭ ಲಭಿಸುತ್ತಿದೆಯೇ ಎನ್ನುವುದರ ಮೇಲೆ ನಿಗಾ ವಹಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT