ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಹನುಮ ಜಯಂತಿ ಆಚರಣೆ

Last Updated 9 ಏಪ್ರಿಲ್ 2020, 9:45 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣದ ಒಂದನೇ ವಾರ್ಡ್‌ನಲ್ಲಿರುವ ರುದ್ರಭಾವಿ ಹನುಮಪ್ಪನ ದೇವಸ್ಥಾನದಲ್ಲಿ ಬುಧವಾರ ಹನುಮ ಜಯಂತಿ ಆಚರಿಸಲಾಯಿತು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು.

ನೇತೃತ್ವವಹಿಸಿದ್ದ ಪಟ್ಟಣ ಪಂಚಾಯಿತಿ ಸದಸ್ಯೆ ಕಲಾವತಿ ಮರದಡ್ಡಿ ಮಾತನಾಡಿ,‘ಕೊರೊನಾ ಸೋಂಕಿನಿಂದ ದೇಶದ ಜನತೆಯಲ್ಲಿ ಆತಂಕ ಮೂಡಿದೆ. ಆರೋಗ್ಯ ಇಲಾಖೆ ಹೇಳುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ದೇವರ ದಯೆಯಿಂದ ಕೊರೊನಾ ಸೋಂಕು ಯಾರಿಗೂ ತಗಲದೇ ನಿರ್ಮೂಲನೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಮೂರ್ತಿಗೆ ಅರ್ಚಕರಾದ ರಾಘವೇಂದ್ರಚಾರ ಹಾಗೂ ಮಾಧರ ಜೋಶಿ ವಿಶೇಷ ಪೂಜೆ ನೆರವೇರಿಸಿದರು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಸಲಿಂಗಪ್ಪ ಭಾಸ್ಕರ, ರಮೇಶ ಬೇಲೇರಿ, ರೇಣುಕಪ್ಪ ಕಮ್ಮಾರ, ವಾರ್ಡಿನ ಮುಖಂಡರಾದ ಮಲ್ಲಪ್ಪ ಸೂರಕೊಡ, ಚಂದ್ರು ಮರದಡ್ಡಿ, ಕಲ್ಲಪ್ಪ ಕರಮುಡಿ, ವಿರೇಶ ಬಳಿಗಾರ, ಶಿವರಾಜ ಕುಂಬಾರ ಹಾಗೂ ಸುದೀಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT