ಕೊಪ್ಪಳ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಂಗಳೂರು ರಾಜ್ಯಶಾಖೆಗೆ ಮೂರು ವರ್ಷಗಳ ಅವಧಿಯ ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗೆ ಮಂಗಳವಾರ ರೆಡ್ ಕ್ರಾಸ್ ಸಂಸ್ಥೆ ಕಚೇರಿಯಲ್ಲಿ ಚುನಾವಣೆ ಜರುಗಿತು.

ಸಭಾಪತಿಯಾಗಿ ಉಡುಪಿ ಶಾಖೆಯ ರಾಜೀವ ಶೆಟ್ಟಿ ಹಾಗೂ ಉಪಸಭಾಪತಿಯಾಗಿ ಕೊಪ್ಪಳ ಶಾಖೆಯ ಡಾ. ಶ್ರೀನಿವಾಸ ಹ್ಯಾಟಿ ಆಯ್ಕೆಯಾಗಿದ್ದಾರೆ.

ಸಭಾಪತಿ ಹುದ್ದೆಗೆ ಮೂರು ಜನ ಆಕಾಂಕ್ಷಿಗಳು ಸ್ಪರ್ಧಿಸಿದ್ದರು. ಉಪ ಸಭಾಪತಿ ಹುದ್ದೆಗೆ ಇಬ್ಬರು ಸ್ಪರ್ಧಿಸಿದ್ದರು. ಒಟ್ಟು 30 ಸದಸ್ಯರು ತಮ್ಮ ಮತ ಚಲಾಯಿಸಿದರು. ಅದರಲ್ಲಿ ಸಭಾಪತಿ ಆಯ್ಕೆಯಲ್ಲಿ ಬಾಗಲಕೋಟೆ ಶಾಖೆಯ ಆನಂದ ಜಿಗಜಿನ್ನಿ, ಶಿವಮೊಗ್ಗ ಶಾಖೆಯ ಎಸ್.ಪಿ. ದಿನೇಶ ಹಾಗೂ ಉಡುಪಿ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಈ ಮೂವರು ತಲಾ 10 ಮತಗಳನ್ನು ಪಡೆದರು. ಕೊನೆಗೆ ಚೀಟಿ ಎತ್ತಿದಾಗ ಉಡುಪಿ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಸಭಾಪತಿಯಾಗಿ ಆಯ್ಕೆಯಾದರು.

ಉಪ ಸಭಾಪತಿಗೆ ಇಬ್ಬರು ಸ್ಪರ್ಧಿಸಿದ್ದರು. ಇದರಲ್ಲಿ ಬಳ್ಳಾರಿಯ ಎಂ.ಎ. ಶಕೀಬ್ 11 ಹಾಗೂ ಕೊಪ್ಪಳ ಶಾಖೆಯ ಡಾ.ಶ್ರೀನಿವಾಸ ಹ್ಯಾಟಿ 19 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.