ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನರ್‌ ವೀಲ್‌: ಪದಾಧಿಕಾರಿಗಳ ಪದಗ್ರಹಣ

Last Updated 8 ಜುಲೈ 2022, 14:03 IST
ಅಕ್ಷರ ಗಾತ್ರ

ಕೊಪ್ಪಳ: ಇನ್ನರ್‌ ವೀಲ್‌ ಕೊಪ್ಪಳ ತಾಲ್ಲೂಕು ಘಟಕದ 2022- 23ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಾ ಜೈನ್ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು ‘ಕ್ಲಬ್ ವತಿಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಸಾಮಾಜಿಕ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮಾಡಲು ಆದ್ಯತೆ ನೀಡಲಾಗುವುದು‘ ಎಂದರು.

ಉಮಾ ತಂಬ್ರಳಿ (ಕಾರ್ಯದರ್ಶಿ), ವಿಜಯಲಕ್ಷ್ಮಿ ಹಂಚಾಟೆ (ಉಪಾಧ್ಯಕ್ಷೆ), ವಿದ್ಯಾ ಬೆಟಗೇರಿ (ಖಜಾಂಚಿ), ಐಎಸ್ಒ ಮೀನಾಕ್ಷಿ ಬಣ್ಣದ ಬಾವಿ, ಎಡಿಟರ್ ಸುಜಾತ ಪಟ್ಟಣಶೆಟ್ಟಿ ಅಧಿಕಾರ ಪದಗ್ರಹಣ ಮಾಡಿದರು.

ಕ್ಲಬ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಪಿ ಮಾಧವಿ, ಮುಖ್ಯ ಅತಿಥಿಯಾಗಿದ್ದ ಕಿರ್ಲೋಸ್ಕರ್ ಲೇಡಿಸ್‌ ಕ್ಲಬ್‌ ಅಧ್ಯಕ್ಷೆ ಕಮಲಾ ಗುಮಾಸ್ತೆ, ನಿಕಟಪೂರ್ವ ಅಧ್ಯಕ್ಷೆ ನೀತಾ ತಂಬ್ರಳ್ಳಿ, ವೈದ್ಯೆ ರಾಧಾ ಕುಲಕರ್ಣಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT