ಕುಷ್ಟಗಿ: ಬಾಗಲಕೋಟೆ ಜಿಲ್ಲೆಯ ಮುಧೋಳದ ಖಾಡೆ ಸಾಹಿತ್ಯ ಪ್ರತಿಷ್ಠಾನವು ಸಾಹಿತಿ ದಿ. ಜಿ.ಬಿ.ಖಾಡೆ ಅವರ ಸ್ಮರಣಾರ್ಥ ನೀಡುವ 'ಜನಪದ ಸಾಧಕ' ಪ್ರಶಸ್ತಿಗೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಜೀವನಸಾಬ್ ವಾಲೀಕಾರ ಆಯ್ಕೆಯಾಗಿದ್ದಾರೆ.

ಶಿಕ್ಷಕ ವೃತ್ತಿಯ ಜೊತೆಗೆ ದೇಶ ವಿದೇಶದಲ್ಲಿಯೂ ಜಾನಪದ ಸಂಸ್ಕೃತಿಯ ಮಹತ್ವ ಬಿಂಬಿಸುವ ಮೂಲಕ ಜಾನಪದ ಕ್ಷೇತ್ರದ ಬೆಳವಣಿಗೆಗೂ ಶ್ರಮವಹಿಸುತ್ತಿರುವ ಜೀವನಸಾಬ್ ಸದ್ಯ ಜಾನಪದ ಅಕಾಡಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಾ.1ರಂದು ಮುಧೋಳ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆಯಲಿರುವ ಖಾಡೆ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.