ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದ್ಧತೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಪತ್ರಿಕೋದ್ಯಮ

ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ ಕಳವಳ
Last Updated 1 ಜುಲೈ 2020, 13:42 IST
ಅಕ್ಷರ ಗಾತ್ರ

ಕೊಪ್ಪಳ: ಇಂದು ಬದ್ಧತೆ, ಮೌಲ್ಯಗಳೇ ಇಲ್ಲದ ಪತ್ರಿಕೋದ್ಯಮ ಚಾಲ್ತಿಯಲ್ಲಿದೆ.ಕಂಪನಿಗಳ, ಸರಕಾರಗಳ, ಭ್ರಷ್ಟ ರಾಜಕಾರಣಿಗಳ, ಅಧಿಕಾರಿಗಳ ಪರವಾಗಿ ಮಾಧ್ಯಮ ಕೆಲಸ ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದುಹಿರಿಯ ಪತ್ರಕರ್ತ ಬಸವರಾಜ ಶೀಲವಂತರ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮೀಡಿಯಾ ಕ್ಲಬ್‌ನಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದು ಎಲ್ಲ ಮಾಧ್ಯಮ ಸಂಸ್ಥೆಗಳಿಗೂ ಅನ್ವಯಿಸುವುದಿಲ್ಲ. ಆದರೆ ಕೆಲ ಮಾಧ್ಯಮ ಸಂಸ್ಥೆಗಳ ನಡೆ ಹೀಗಿದೆ.ದೇಶ ಸಾಕಷ್ಟು ಸಮಸ್ಯೆಗಳಿವೆ. ಕೆಲ ಸಂಸ್ಥೆಗಳು ಅವೆಲ್ಲವನ್ನು ಬಿಟ್ಟು ಜನ ಯಾವುದನ್ನು ಧಿಕ್ಕರಿಸುತ್ತಾರೋ ಅಂತಹ ದೃಶ್ಯಗಳನ್ನೇ ಬಿತ್ತರಿಸುತ್ತಿವೆ.ಮೌಢ್ಯತೆ, ಕೋಮು ಗಲಭೆಗೆ ಪ್ರಚೋದನೆ ನೀಡುವ ಬೆಂಕಿ ಹಚ್ಚುವ ಕೆಲಸವನ್ನು ಮಾದ್ಯಮಗಳು ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು,ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕುರಿತು ರೈತರ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸಗಳನ್ನು ಮಾಡಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ,ಕೊರೊನಾ ತತ್ತರದ ನಡುವೆ ಪತ್ರಕರ್ತನ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕಿದೆ.ಪತ್ರಕರ್ತನಿಗೆ ಈಗ ಜೀವದ ಹಂಗು ತೊರೆದು, ಎದೆಗಾರಿಕೆ ತೋರುವ ಸಮಯ ಬಂದಿದೆ.ಪತ್ರಿಕಾ ವ್ಯವಸ್ಥೆಯ ಬೇರಿಗೇ ಹುಳು ಬಿದ್ದಿದೆ. ಆದ್ದರಿಂದ ಸುಮ್ಮನೆ ಟೊಂಗೆಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.ಬೇರಿಗೆ ಬಿದ್ದಿರುವ ಹುಳುಗಳನ್ನು ತೆಗೆದು ಹಾಕುವ ಮನೋಬಲ ಬೇಕಿದೆ.ಪತ್ರಕರ್ತನಾದವನ ಬರಹ ದೋಷಗಳಿಂದ ಮುಕ್ತವಾಗಿರಬೇಕು. ಆದರೆ ಬಹಳಷ್ಟು ಜನ ಕಾಗುಣಿತ ದೋಷಗಳನ್ನು ಮಾಡುವುದು ಕಂಡಿದ್ದು, ಸುಧಾರಿಸಿಕೊಳ್ಳುವ ಅಗತ್ಯ ಇದೆ.ಮೊದಲು ನಾವು ಸರಿಯಾಗೋಣ, ಆನಂತರ ಸಮಾಜವನ್ನು ಸರಿಪಡಿಸೋಣ ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ಮಾತನಾಡಿ, ಸಮಾಜದ ಅಂಕು-ಡೊಂಕು ತಿದ್ದುವ ಪತ್ರಕರ್ತನಿಗೆ ಈಗ ಸಂಕಷ್ಟ ಬಂದೊದಗಿದೆ. ಕೊರೊನಾದ ಸಂಧಿಗ್ದ ಸ್ಥಿತಿಯಲ್ಲೂ ಮಾಧ್ಯಮ ಸಂಸ್ಥೆಗಳು ಕೆಲವರನ್ನ ಕೆಲಸದಿಂದ ಕಿತ್ತು ಹಾಕುತ್ತಿವೆ. ಈಗ ವರದಿಗಾರನ ಕೆಲಸ ಬರೀ ಸುದ್ದಿ ಕೊಡುವುದಷ್ಟೇ ಅಲ್ಲ, ಸಂಸ್ಥೆಗೆ ಆದಾಯವನ್ನು ತಂದುಕೊಡಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT