ಗುರುವಾರ , ಅಕ್ಟೋಬರ್ 1, 2020
27 °C

ಕೊಪ್ಪಳ | ಪತ್ನಿ ಪ್ರತಿಮೆ ಪ್ರತಿಷ್ಠಾಪಿಸಿ ಗೃಹ ಪ್ರವೇಶ ಮಾಡಿದ ಉದ್ಯಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 Industrialist Shrinivas Gupta

ಕೊಪ್ಪಳ: ಸಮೀಪದ ಭಾಗ್ಯನಗರ ಪಟ್ಟಣದ ಉದ್ಯಮಿಯೊಬ್ಬರು ಗೃಹ ಪ್ರವೇಶಕ್ಕೆ ಪತ್ನಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.

ಉದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆ.ವಿ.ಎನ್. ಮಾಧವಿ ಅವರು ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಸವಿನೆನಪಿಗಾಗಿ ಪತಿ ಶ್ರೀನಿವಾಸ ಗುಪ್ತಾ ಪುತ್ಥಳಿ ನಿರ್ಮಿಸಿದ್ದಾರೆ.

ಭಾಗ್ಯನಗರದ ರೈಲ್ವೆ ನಿಲ್ಧಾಣ ಬಳಿಯ ಗುಪ್ತಾ ಅಪಾರ್ಟ್ಮೆಂಟ್ ಆವರಣದಲ್ಲಿ ಮನೆ ನಿರ್ಮಿಸಬೇಕು ಎಂಬುದು ಪತ್ನಿಯ ಬಯಕೆಯಾಗಿತ್ತು. ಅವರ ಆಸೆ ಪ್ರಸ್ತುತ ಪತಿ ಈಡೇರಿಸಿದ್ದು, ಆದರೆ ಅದನ್ನು ನೋಡಲು ಪತ್ನಿ ಇಲ್ಲದಿದರುವುದರಿಂದ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ಅವರ ನೆನಪನ್ನು ಜೀವಂತವಾಗಿದ್ದಾರೆ.

ಬೆಂಗಳೂರು ಗೊಂಬೆ ಮನೆಯಲ್ಲಿ ಸಿಲಿಕಾನ್ ಇಂಪೋರ್ಟೆಡ್ ಮಟಿರಿಯಲ್ ಬಳಸಿ ಪ್ರತಿಮೆ ತಯಾರಿಸಲಾಗಿದೆ. ಸುಮಾರು 15 ರಿಂದ 20 ಕೆಜಿ ತೂಕ ಹೊಂದಿರುವ ಈ ಪ್ರತಿಮೆಯನ್ನು ಒಂದು ವರ್ಷದ ಅವಧಿಯಲ್ಲಿ ₹ 10 ಲಕ್ಷ ವೆಚ್ಚದೊಂದಿಗೆ ಶಿಲ್ಪಿ ಶ್ರೀಧರಮೂರ್ತಿ ತಯಾರಿಸಿದ್ದಾರೆ.

ಪ್ರತಿಮೆ ನಿರ್ಮಿಸಿರುವುದು ಮಕ್ಕಳಿಗೂ ಸಂತಸ ತಂದಿದೆ. ಅಲ್ಲದೇ ಪ್ರತಿಮೆಯನ್ನು ಕಂಡ ತಕ್ಷಣ ಆತ್ಮತೃಪ್ತಿ ನೀಡುತ್ತದೆ ಎನ್ನುತ್ತಾರೆ ಶ್ರೀನಿವಾಸ ಗುಪ್ತಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು