ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಪರಿಶ್ರಮದಿಂದ ಸಾಧನೆ ಸಾಧ್ಯ : ಸುರೇಶ್‌ ಮಳ್ಳಿಕೇರಿ

ಕಲ್ಲಪ್ಪ ಕ್ಯಾಂಪ್‌ನ ಸುರೇಶ್‌ ಮಳ್ಳಿಕೇರಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ
Last Updated 25 ಡಿಸೆಂಬರ್ 2019, 12:44 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನಕಲ್ಲಪ್ಪ ಕ್ಯಾಂಪ್‌ನ ಸುರೇಶ ಮಲ್ಲಪ್ಪ ಮಳ್ಳಿಕೇರಿಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ ಡಿವೈಎಸ್ಪಿ ಹುದ್ದೆಗೆ ಆಯ್ಕೆಗೊಂಡಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುರೇಶ ಚಿಕ್ಕಂದಿನಿಂದಲೂ ಓದಿನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಗಂಗಾವತಿಯಲ್ಲೇ ಪೂರೈಸಿ, ಹುಬ್ಬಳ್ಳಿಯಲ್ಲಿ ಪಿಯು, ಮೈಸೂರಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಆಂಡ್ ಕಂಪ್ಯೂಟರ್ ಸೈನ್ಸ್ ಪದವಿ ವ್ಯಾಸಂಗ ಪೂರೈಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳಿಗೆ ನೀಡುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿ, 9 ತಿಂಗಳ ತರಬೇತಿಯನ್ನು ದೆಹಲಿಯಲ್ಲಿ ಪಡೆದಿದ್ದಾರೆ. ನಿತ್ಯ 8 ಗಂಟೆಗಳ ಕಾಲ ಓದುವುದಕ್ಕೆ ಸಮಯ ಮೀಸಲಿರಿಸಿದ್ದರು. ಮೊದಲ ಬಾರಿ ಕೆಪಿಎಸ್‌ಸಿ ಪರೀಕ್ಷೆ ಬರೆದು ನಿರಾಶೆ ಅನುಭವಿಸಿದ್ದರು. 2ನೇ ಪ್ರಯತ್ನದಲ್ಲೇ ತಮ್ಮ ಕನಸು ಸಾಕಾರಗೊಳಿಸಿಗೊಂಡ ಸಂತಸ ಅವರಲ್ಲಿ ಇದೆ.

ಆರು ಜನ ತುಂಬು ಕುಟುಂಬದಲ್ಲಿ ಪಿಯುಸಿವರೆಗೆ ಯಾರೂ ಓದಿಲ್ಲ. ಸುರೇಶರ ಓದಿನ ಆಸಕ್ತಿಗೆ ಎಲ್ಲರ ಸಹಕಾರ ಇತ್ತು. ಈಗ ಅವರ ನಿರೀಕ್ಷೆ ನಿಜವಾಗಿದ್ದು, ಡಿವೈಎಸ್‌ಪಿಯಾಗಿ ಆಯ್ಕೆಯಾದ ಕೆಲವೇ ಕೆಲವು ಜನರಲ್ಲಿ ಇವರು ಒಬ್ಬರಾಗಿದ್ದು, ಸಂತಸ ಇಮ್ಮಡಿಸಿದೆ.

‘ಸುರೇಶ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಓದಿನಲ್ಲಿ ಯಾವಾಗಲೂ ಮುಂದೆ ಇರುತ್ತಿದ್ದ. ಆತನ ಕಠಿಣ ಶ್ರಮಕ್ಕೆ ಇವತ್ತು ಫಲ ಸಿಕ್ಕಿದೆ. ಡಿವೈಎಸ್‌ಪಿ ಆಗುವ ಮೂಲಕ ನಮ್ಮ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ’ ಎನ್ನುತ್ತಾರೆ ಕ್ಯಾಂಪ್‌ನ ಪಂಚಾಯಿತಿ ಸದಸ್ಯ ಕನಕರಾಜ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT