ಮಂಗಳವಾರ, ಆಗಸ್ಟ್ 9, 2022
20 °C
ಶಾಸಕ ಅಮರೇಗೌಡ ಬಯ್ಯಾಪುರ ಮನವಿ

ಕಾಮಗಾರಿಗಳ ಮೇಲೆ ನಿಗಾ ಇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ‘ಸಮುದಾಯ ಭವನದ ಕಾಮಗಾರಿ ಕಳಪೆಯಾಗದಂತೆ ಇಲ್ಲಿನ ಜನರು ನಿಗಾ ಇಡಬೇಕು’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಭಾನುವಾರ 12ನೇ ವಾರ್ಡ್‌ನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

₹10 ಲಕ್ಷ ವೆಚ್ಚದಲ್ಲಿ ಮೌಲಾನಾ ಅಬುಲ್ ಕಲಾಮ್ ಆಜಾದ್ ಸಮುದಾಯ ಭವನದ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಾಜಿ ಶಾಸಕ ಹಸನಸಾಬ ದೋಟಿಹಾಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ ಕುಂಟನಗೌಡ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಶೈಲ ಮೋಟಗಿ, ವೀರಭದ್ರಪ್ಪ ಪತ್ತಾರ, ಚಂದ್ರು ಬೆಳಗಲ್, ರಮೇಶ ಬಡಿಗೇರ, ರುದ್ರಗೌಡ ಗೌಡಪ್ಪನವರ, ಪ್ರಮುಖರಾದ ಗೌಸ್‍ಮೊಹಿನುದ್ದೀನ್ ವಂಟೆಳಿ, ಚಂದಪ್ಪ, ಮಹಾಂತೇಶ, ಸಂಗಯ್ಯ ವಸ್ತ್ರದ, ಆಸಿಫ್ ಡಲಾಯತ್, ಸೂಚಪ್ಪ, ಮೈನುದ್ದೀನ್ ಖಾಜಿ ಹಾಗೂ ಗೌಸ್‍ ಮೊಹಿನುದ್ದೀನ್ ವಂಟೆಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.