ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಸಾಧನೆಯ ಕನಸು ಹುಟ್ಟು ಹಾಕುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ: ಪ್ರಾಣೇಶ್ ಬಣ್ಣನೆ

Published : 9 ಜನವರಿ 2026, 7:09 IST
Last Updated : 9 ಜನವರಿ 2026, 7:09 IST
ಫಾಲೋ ಮಾಡಿ
Comments
ಗವಿಮಠದ ಜಾತ್ರೆಯಲ್ಲಿ ಜಲಂಧರ್‌ ನಾಯಕ್‌ ಅವರನ್ನು ಸನ್ಮಾನಿಸಲಾಯಿತು
ಗವಿಮಠದ ಜಾತ್ರೆಯಲ್ಲಿ ಜಲಂಧರ್‌ ನಾಯಕ್‌ ಅವರನ್ನು ಸನ್ಮಾನಿಸಲಾಯಿತು
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ತಿನಿಸುಗಳ ಅಂಗಡಿಯಲ್ಲಿ ಕಾರ್ಖಾನೆಗಳ ಮಾಲಿನ್ಯ ವಿರೋಧಿ ಹೋರಾಟ ಸಂದೇಶ ಅಳವಡಿಸಿದ ಮಾಲೀಕನಿಗೆ ಸನ್ಮಾನಿಸಲಾಯಿತು 
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ತಿನಿಸುಗಳ ಅಂಗಡಿಯಲ್ಲಿ ಕಾರ್ಖಾನೆಗಳ ಮಾಲಿನ್ಯ ವಿರೋಧಿ ಹೋರಾಟ ಸಂದೇಶ ಅಳವಡಿಸಿದ ಮಾಲೀಕನಿಗೆ ಸನ್ಮಾನಿಸಲಾಯಿತು 
ಘೋಷಣೆಗಳನ್ನು ಬರೆಸುವ ಮೂಲಕ ಹೋರಾಟವನ್ನು ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ ಇದಕ್ಕೆ ಪ್ರೇರಣೆಯಾದ ಸ್ವಾಮೀಜಿ ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆ
ಅಲ್ಲಮಪ್ರಭು ಬೆಟ್ಟದೂರು ವೇದಿಕೆಯ ಪ್ರಧಾನ ಸಂಚಾಲಕ
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬೆಟ್ಟ ಕಡಿದು ರಸ್ತೆ ನಿರ್ಮಿಸಬೇಕಾಯಿತು. ನಮ್ಮೂರು ಅರಣ್ಯ ಪ್ರದೇಶದಲ್ಲಿದೆ. ಈಗಲೂ ನಮ್ಮ ಮನೆಗೆ ಬಾಗಿಲು ಇಲ್ಲ. ನನ್ನ ಹೋರಾಟ ಈಗಲೂ ಮುಂದುವರಿದಿದೆ
ಜಲಂಧರ್‌ ನಾಯಕ ಬೆಟ್ಟ ಕಡಿದ ಸಾಹಸಿ
ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಾಧನೆ ಮಾಡಿದವರನ್ನು ಸಾಹಸಿಗಳನ್ನು ಗುರುತಿಸುವುದು ನಮ್ಮ ಕರ್ತವ್ಯ. ಜಾತ್ರೆ ಸಂದರ್ಭದಲ್ಲಿ ಗವಿಮಠ ಈ ಕೆಲಸವನ್ನು ನಿರಂತರ ಮಾಡುತ್ತಿದೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
ಜಾತ್ರೆಯ ಅಂಗಡಿಕಾರರಿಗೆ ಸನ್ಮಾನ
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಹಾಗೂ ಹೊಸದಾಗಿ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳ ವಿರುದ್ಧ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸದಸ್ಯರು ಹೋರಾಟಕ್ಕೆ ಜಾತ್ರೆಯಲ್ಲಿ ಬೆಂಬಲ ನೀಡಿದ ಅಂಗಡಿಕಾರರಿಗೆ ಸನ್ಮಾನಿಸಿದರು. 70ನೇ ದಿನದ ಹೋರಾಟದಲ್ಲಿ ಸಂಘಟನೆಯವರು ಫಲಕಗಳನ್ನು ಹಾಕಿದ ಮಾಲೀಕರಾದ ಪ್ರದೀಪ ಎಂ.ಡಿ. ರಫೀಕ್ ಎಂ.ಡಿ.ಜಾವೀದ್ ಎಂ.ಡಿ. ಹುಸೇನ್ ಮಿಠಾಯಿ ಗುರುರಾಜ ಬಳ್ಳಾರಿ ಅವರನ್ನು ಸನ್ಮಾನ ಮಾಡಿದರು. ಮಿಠಾಯಿ ಪಳಾರ ಅಂಗಡಿಗಳಲ್ಲಿ ಕಾರ್ಖಾನೆ ವಿರುದ್ಧ ಪರಿಸರ ರಕ್ಷಣೆ ಬಲ್ಡೋಟಾ ಹಠಾವೊ ಸಂದೇಶಗಳನ್ನು ಹಾಕಲಾಗಿದೆ. ಮಹಾರಥೋತ್ಸವದ ಹಿಂದಿನ ದಿನ ವಿದ್ಯಾರ್ಥಿಗಳು ಹಾಕಿದ್ದ ರಂಗೋಲಿಯಲ್ಲಿಯೂ ಈ ಕುರಿತು ಜಾಗೃತಿ ಸಂದೇಶಗಳಿದ್ದವು.
ಒಡಿಶಾದಿಂದಲೇ ಊಟ ತಂದಿದ್ದ ಬೆಟ್ಟ ಕಡಿದ ಸಾಧಕ
ಒಡಿಶಾದ ಕಂದಮಾಲ್‌ ಜಿಲ್ಲೆಯ ಗುಮ್ಸಾಹಿ ಗ್ರಾಮದ ಕೃಷಿಕ ಹಾಗೂ ಮಕ್ಕಳ ಓದಿಗಾಗಿ ಬೆಟ್ಟ ಕಡಿದು ಎಂಟು ಕಿ.ಮೀ. ರಸ್ತೆ ಕಡಿದ ಜಲಂಧರ್ ನಾಯಕ್ ಗವಿಮಠದ ಜಾತ್ರೆಯಲ್ಲಿ ಎಲ್ಲರ ಮುಂದೆಯೂ ‘ಹೀರೊ’ ಆದರು. ಆದಿವಾಸಿ ಸಮುದಾಯದ ಜಲಂಧರ್ ನೆಲೆಸಿರುವ ಗ್ರಾಮದಲ್ಲಿ ಮೊದಲು ಐದು ಕುಟುಂಬಗಳಿದ್ದವು. ಸೌಲಭ್ಯಗಳ ಬರಕ್ಕೆ ನಾಲ್ಕು ಕುಟುಂಬ ಅಲ್ಲಿಂದ ಪಲಾಯನ ಮಾಡಿದರೆ 53 ವರ್ಷದ ಜಲಂ‌ಧರ್‌ ತಮ್ಮ ಮೂವರು ಮಕ್ಕಳ ಓದಿಗೆ ಅನುಕೂಲವಾಗಲು ತಮ್ಮೂರಿನಿಂದ ಫುಲಬಾನಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಬೆಟ್ಟವನ್ನೇ ಕಡಿದು ಸಂಪರ್ಕ ಕಲ್ಪಿಸಿದ್ದಾರೆ. ಇದಕ್ಕಾಗಿ ಎರಡು ವರ್ಷ ಕೆಲಸ ಮಾಡಿ ಪ್ರಸ್ತುತ ಎಸ್‌ಎಸ್‌ಎಲ್‌ಸಿ ಪಿಯುಸಿ ಹಾಗೂ ಪದವಿ ಓದುತ್ತಿರುವ ಮಕ್ಕಳ ಭವಿಷ್ಯಕ್ಕೆ ನೆರವಾಗಿದ್ದಾರೆ. ಇಂಥ ಸಾಧಕ ಕೊಪ್ಪಳದ ಜಾತ್ರೆಗೆ ಬಂದು ಮೂರು ದಿನ ತಂಗಿದ್ದಾಗ ತಮ್ಮೂರಿನಿಂದಲೇ ತಂದಿದ್ದ ಚಪಾತಿ ಗೆಣಸು ಅವಲಕ್ಕಿ ಮಾತ್ರ ತಿಂದಿದ್ದಾರೆ. ಸ್ಥಳೀಯವಾಗಿ ಊಟದ ವ್ಯವಸ್ಥೆ ಮಾಡಿದ್ದರೂ ಅದನ್ನು ಒಪ್ಪದೆ ತಮ್ಮೂರಿನ ಊಟ ಮಾತ್ರ ಸವಿದು ಜಾತ್ರೆ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT