ಹಿಂದೆಯೂ ಮಾಡಿದ್ದರು ಕಾರ್ಯಕ್ರಮ
ಪ್ರಸ್ತುತ ಪೌರಾಯುಕ್ತರಾಗಿರುವ ವೆಂಕಟೇಶ್ ನಾಗನೂರು ಹಿಂದೆ ನವಲಗುಂದದಲ್ಲಿ ಕರ್ತವ್ಯ ನಿರ್ವಹಿಸುವಾಗ ದಾಖಲೆಗಳ ನೋಂದಣಿಗೆ ಹೀಗೆ ಪ್ರತಿವಾರವೂ ಅಭಿಯಾನ ಮಾಡಿದ್ದರು. ಅದೇ ಪ್ರಯೋಗ ಈಗ ಕೊಪ್ಪಳ ಜಿಲ್ಲೆಯಲ್ಲಿಯೂ ಮಾಡಲಾಗುತ್ತಿದೆ.
‘ಇನ್ನು ಮುಂದೆ ಪ್ರತಿ ಸೋಮವಾರವೂ ಆಂದೋಲನ ನಡೆಸಿ ಆಸ್ತಿ ನೋಂದಣಿ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಅನಗತ್ಯವಾಗಿ ಕಚೇರಿ ಅಲೆದಾಡುವುದು ತಪ್ಪುತ್ತದೆ. ವಿವಿಧ ಚಲನ್‌ಗಳನ್ನು ಪಡೆದುಕೊಳ್ಳಲು ವ್ಯಾಟ್ಸ್ ಆ್ಯಪ್ ನಂಬರ್ ನೀಡಿ ಚಲನ್‌ಗಳನ್ನು ಸಾರ್ವಜನಿಕರಿಗೆ ಒದಗಿಸುವ ಯೋಜನೆ ಬಗ್ಗೆ ಚರ್ಚೆಯಾಗಿದ್ದು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಪೌರಾಯುಕ್ತರು ತಿಳಿಸಿದರು.