ಕೊಪ್ಪಳ: ‘ಎಲ್ಲ ಧರ್ಮಗಳ ಸಾರ ಶಾಂತಿ ಮತ್ತು ಪ್ರೀತಿಯೇ ಆಗಿದೆ’ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಮಿತ್ರಾ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಈಚೆಗೆ ಆಂತರಿಕ ಗುಣಮಟ್ಟ ಭರವಸೆ ಕೋಶ, ದರೋಜಿ ಈರಮ್ಮ ರೆಂಜರ್ಸ್ ಘಟಕದ ಸಹಯೋಗದಲ್ಲಿ ನಡೆದ ಸ್ಕೌಟ್ ಆಂಡ್ ಗೈಡ್ಸ್ ಸಂಸ್ಥಾಪಕ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನೆ ಸಮಾರಂಭದಲ್ಲಿ ಮಾತನಾಡಿ,‘ಧರ್ಮಗಳಲ್ಲಿರುವ ಒಳ್ಳೆಯ ವಿಚಾರಗಳನ್ನು ಮತ್ತು ನೀತಿಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಹುಲಿಗೆಮ್ಮ ಮಾತನಾಡಿ,‘ಧರ್ಮಗಳು ಮಾನವರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹುಟ್ಟಿಕೊಂಡಿವೆ. ಧರ್ಮಗಳ ಆಚರಣೆಗಳು ಮನಸಿಗೆ ತೃಪ್ತಿ ನೀಡುತ್ತವೆ’ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಪ್ರದೀಪ್ ಕುಮಾರ, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಮಯ್ಯ, ಕಾಲೇಜಿನ ಸ್ಕೌಟ್ ಆಂಡ್ ಗೈಡ್ಸ್ ಸಂಚಾಲಕಿ ಶುಭಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ನರಸಿಂಹ, ರೇಂಜರ್ ವಿದ್ಯಾರ್ಥಿಗಳಾದ ನಾಗರತ್ನ, ನಂದಿನಿ, ಶಾಂತವ್ವ, ಅಂಜಲಿ, ಶಂಕ್ರಮ್ಮ, ದುರ್ಗಮ್ಮ, ಅಂಜಲಿ, ಭವ್ಯ, ರಾಧಿಕಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.