ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ ಹುಣ್ಣಿಮೆ: ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

Published 5 ಜೂನ್ 2023, 6:42 IST
Last Updated 5 ಜೂನ್ 2023, 6:42 IST
ಅಕ್ಷರ ಗಾತ್ರ

ಮುನಿರಾಬಾದ್: ಇಲ್ಲಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಾರ ಹುಣ್ಣಿಮೆ ಪ್ರಯುಕ್ತ ಭಾನುವಾರ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ದೇವಸ್ಥಾನದಲ್ಲಿ ಬೆಳಿಗ್ಗೆ ಅಲಂಕಾರ, ವಿಶೇಷ ಪೂಜೆ ಮಹಾ ಮಂಗಳಾರತಿ ನಡೆಯಿತು. ಬೆಳಿಗ್ಗೆಯಿಂದಲೇ ರೈಲು, ಬಸ್‌ ಮತ್ತು ಲಘು ವಾಹನಗಳ ಮೂಲಕ ಬಂದ ಸಾವಿರಾರು ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಗಂಗಾ ಪೂಜೆ ಮತ್ತು ಜೋಗತಿಪೂಜೆ, ಹರಕೆ ತೀರಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ನಂತರ ಫಳಾರ, ಆಟಿಕೆ ಸಾಮಾನು, ಸೌಂದರ್ಯ ವರ್ಧಕಗಳು, ಗೃಹೋಪಯೋಗಿ ವಸ್ತುಗಳು, ದೇವರ ಚಿತ್ರಪಟಗಳನ್ನು ಮತ್ತು ಕುಂಕುಮ, ಭಂಡಾರ, ಬಳೆ ಖರೀದಿಸಿ, ಸಂಭ್ರಮಿಸಿದರು.

ಜಾತ್ರೆಯ ಸಂಭ್ರಮ: ಕಳೆದ ತಿಂಗಳು 13 ರಂದು ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಜರುಗಿತ್ತು. ಜಾತ್ರೆಗೆ ಬಾರದ ಭಕ್ತರು ಹುಣ್ಣಿಮೆಯ ದಿನ ಬಂದು ದರ್ಶನ ಪಡೆಯುವುದು ಇಲ್ಲಿಯ ವಾಡಿಕೆ.

ಹುಣ್ಣಿಮೆಯ ಅಂಗವಾಗಿ ಹುಲಿಗೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದ ಭಕ್ತರು ಜೋಗತಿ ಪೂಜೆ ನೆರವೇರಿಸಿದರು
ಹುಣ್ಣಿಮೆಯ ಅಂಗವಾಗಿ ಹುಲಿಗೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದ ಭಕ್ತರು ಜೋಗತಿ ಪೂಜೆ ನೆರವೇರಿಸಿದರು
ಹುಣ್ಣಿಮೆಯ ಅಂಗವಾಗಿ ಹುಲಿಗೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದ ಭಕ್ತರು ಕಂಬಳಿ ಖರೀದಿಯಲ್ಲಿ ತೊಡಗಿದ್ದರು
ಹುಣ್ಣಿಮೆಯ ಅಂಗವಾಗಿ ಹುಲಿಗೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದ ಭಕ್ತರು ಕಂಬಳಿ ಖರೀದಿಯಲ್ಲಿ ತೊಡಗಿದ್ದರು
ಹುಣ್ಣಿಮೆಯ ಅಂಗವಾಗಿ ಹುಲಿಗೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದ ಭಕ್ತರು ಫಳಾರ ಖರೀದಿಸಿದರು
ಹುಣ್ಣಿಮೆಯ ಅಂಗವಾಗಿ ಹುಲಿಗೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದ ಭಕ್ತರು ಫಳಾರ ಖರೀದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT