ಕುಷ್ಟಗಿ: ಪ್ರಭಾವಿಗಳು, ರಾಜಕೀಯ ಪ್ರಮುಖರು, ಸಂಘಟನೆಗಳ ಪ್ರಮುಖರು ಇರುವ ಬಡಾವಣೆಗಳಲ್ಲಿ ಉತ್ತಮ ರಸ್ತೆಗಳು, ಚರಂಡಿಗಳು, ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ಜನಸಾಮಾನ್ಯರು, ಬಡವರು ಇರುವ ಬಡಾವಣೆಗಳ ಅವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ.

ಹೌದು, ಇದು ಪಟ್ಟಣದ ಬಹುತೇಕ ಕಡೆಗಳಲ್ಲಿ ಕಂಡುಬರುವ ಚಿತ್ರಣವಿದು. ಪ್ರಮುಖರ ಬಡಾವಣೆ ನೋಡಿದಾಗ ಸುಂದರ ಪಟ್ಟಣದ ಪರಕಲ್ಪನೆ ಸ್ಮೃತಿಪಟದಲ್ಲಿ ಹಾದು ಹೋಗುತ್ತದೆ. ಜನಸಾಮಾನ್ಯರು ಇರುವೆಡೆ ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ. ಅಂಥ ಪ್ರದೇಶದಲ್ಲೇ ಜನ ದೈನಂದಿನ ಬದುಕು ಸವೆಸಬೇಕು ಎನ್ನುವ ಅಸಮಾಧಾನ ಜನರಲ್ಲಿ ಮನೆ ಮಾಡಿದೆ.

ಪಟ್ಟಣದ ಸೌಂದರ್ಯಕರಣಕ್ಕೆ ಪ್ರತಿವರ್ಷ ಪುರಸಭೆಯ ವಾರ್ಷಿಕ ಬಜೆಟ್ದಲ್ಲಿ ಅನುದಾನ ತೆಗೆದಿರಿಸಲಾಗುತ್ತದೆ. ಅದು ಖರ್ಚು ಕೂಡ ಆಗಿರುತ್ತದೆ. ಆದರೆ ಸೌಂದರ್ಯದ ಕುರುಹು ಮಾತ್ರ ಇಲ್ಲ. ಕ್ರಿಯಾಯೋಜನೆ ಇಲ್ಲದಿದ್ದರೂ ಕೆಆರ್ಡಿಎಲ್, ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್ಗಳು ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಆದರೆ ಅಕ್ಕಪಕ್ಕದಲ್ಲೇ ಇರುವ ವಾರ್ಡ್ಗಳಲ್ಲಿ ಸಮಸ್ಯೆ ತಾಂಡವಾಡುತ್ತಿದ್ದರೂ ಅಲ್ಲಿಯ ಪರಿಸ್ಥಿತಿ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎನ್ನುತ್ತಾರೆ ಸಾರ್ವಜನಿಕ ಮಹೇಶ, ಪ್ರಭುಗೌಡ ಪಾಟೀಲ.

4ನೇ ವಾರ್ಡಿನಲ್ಲಿ ಅನೇಕ ಕಡೆ ಉತ್ತಮ ಕಾಂಕ್ರೀಟ್, ಡಾಂಬರ್ ರಸ್ತೆಗಳು ನಿರ್ಮಾಣಗೊಂಡಿವೆ. ಆದರೆ ಅದೇ ವಾರ್ಡಿನ ಬಹುತೇಕ ಕಡೆ ಇನ್ನೂ ಮಣ್ಣಿನ ರಸ್ತೆಗಳಿವೆ. ದಾರಿಗಳೇ ಚರಂಡಿ ರೂಪ ತಾಳಿವೆ. ಹೀಗಿದ್ದರೂ ಪುರಸಭೆ ಹಿಂದಿನ ಪ್ರತಿನಿಧಿಗಳು, ಅಧಿಕಾರಿಗಳು, ಎಂಜಿನಿಯರ್ಗಳು ಒಬ್ಬರೂ ಸಮಸ್ಯೆಯ ಬಗ್ಗೆ ಗಮನಹರಿಸಿಲ್ಲ.

3ನೇ ವಾರ್ಡಿನ ರಾಜಕಾಲುವೆ ಇನ್ನೂ ಅವ್ಯವಸ್ಥೆಯಿಂದಲೇ ಕೂಡಿದೆ. ಮುಲ್ಲಾರ ಓಣಿ, ತೆಗ್ಗಿನ ಓಣಿ, ರಾಯರ ಮಠದ ಬಳಿ, 5ನೇ ವಾರ್ಡ್ ಕೂಡ ಹೀಗೆ. ಬಹುತೇಕ ವಾರ್ಡ್ಗಳನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಅಲ್ಲಿಯ ನಿವಾಸಿಗಳದ್ದು.

ಸಮನ್ವಯ ಕೊರತೆ: ಪಟ್ಟಣದ ಬಹುತೇಕ ಕಡೆ ಕೆಆರ್ಡಿಎಲ್, ಲೋಕೋಪಯೋಗಿ, ಪುರಸಭೆ ವತಿಯಿಂದ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ. ಅಚ್ಚರಿಯ ಸಂಗತಿಯಂದರೆ ಮೂರೂ ಸಂಸ್ಥೆಗಳಲ್ಲಿಯೂ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ.

ಪಟ್ಟಣದ ಎಲ್ಲ ಜವಾಬ್ದಾರಿ ಪುರಸಭೆಗೆ ಸೇರಿದ್ದರೂ ಇತರೆ ಇಲಾಖೆಗಳ ಅಧಿಕಾರಿಗಳು ಪುರಸಭೆಯನ್ನು ಸಂಪರ್ಕಿಸದೆ ತಮಗೆ ತಿಳಿದ ವಾರ್ಡ್ಗಳಲ್ಲಿ, ರಾಜಕೀಯ ಪಟ್ಟಭದ್ರರ ಅಣತಿಯಂತೆ ಕೆಲಸ ಕೈಗೆತ್ತಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯೇ ಇಲ್ಲಿಲ್ಲ ಎನ್ನುತ್ತಾರೆ ಇಲ್ಲಿಯ ಹಿರಿಯ ನಾಗರಿಕರು.

ಪುರಸಭೆ 2026-27ನೇ ಹಣಕಾಸು ವರ್ಷದ ವಾರ್ಷಿಕ ಮುಂಗಡಪತ್ರ ಮಂಡಿಸಲಿದ್ದು, ಸ್ಮಶಾನ ಅಭಿವೃದ್ಧಿ, ಮಟನ್, ಕೋಳಿ ಮಾಂಸದ ಮಾರ್ಕೆಟ್ ಸ್ಥಳ ಬದಲಾವಣೆ, ಸಂತೆ ಮೈದಾನ, ಜೆಸ್ಕಾಂ ಪಕ್ಕದ ವಾಣಿಜ್ಯ ಮಳಿಗೆಗಳನ್ನು ಅರ್ಹರಿಗೆ ಬಾಡಿಗೆಗೆ ಕೊಡುವುದು, ಪಟ್ಟಣದಲ್ಲಿ ಹಸಿರು ಹೆಚ್ಚಿಸಲು ಗಿಡಗಳನ್ನು ಬೆಳೆಸುವುದು ಹೀಗೆ ಅನೇಕ ಜನಪರ ಕೆಲಸಗಳ ಬಗ್ಗೆ ಗಮನಹರಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಉದ್ಯಾನ ಜಾಗ ರಕ್ಷಣೆ ಅಭಿವೃದ್ಧಿ ಕಡೆಗಣನೆ

ಪಟ್ಟಣದ ಅನೇಕ ಬಡಾವಣೆಗಳಲ್ಲಿ ಉದ್ಯಾನ ನಾಗರಿಕ ಬಳಕೆಗೆಂದು ಮೀಸಲಿಟ್ಟಿರುವ ಜಾಗ ಒತ್ತುವರಿಯಾಗಿದ್ದರೂ ಅದರ ಬಗ್ಗೆ ಪುರಸಭೆ ಗಂಭೀರ ಚಿಂತನೆ ನಡೆಸಿದ್ದೂ ತೀರಾ ಅಪರೂಪ ಎನ್ನುತ್ತಾರೆ ಭಗತ್ಸಿಂಗ್ ಸಂಸ್ಥೆ ಅಧ್ಯಕ್ಷ ವಜೀರ ಅಲಿ ಗೋನಾಳ. ಅನೇಕ ವಾರ್ಡ್ಗಳಲ್ಲಿನ ಉದ್ಯಾನ ಜಾಗ ಪಟ್ಟಭದ್ರರು ಕಬಳಿಸಿದ್ದಾರೆ. ಕೊಪ್ಪಳ ಮುಖ್ಯರಸ್ತೆ ಅಕ್ಕಪಕ್ಕದಲ್ಲಿ ಉದ್ಯಾನ ನಾಗರಿಕ ಸೌಲಭ್ಯದ ಜಾಗ ಇದ್ದರೂ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಆಸ್ತಿ ರಕ್ಷಣೆ ವಿಷಯದಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ ಎಂದು 2ನೇ ವಾರ್ಡಿನ ವೀರಭದ್ರಪ್ಪ ಕಡಿವಾಲ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.