ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಗವಿಮಠದ ದಾಸೋಹಕ್ಕೆ ಲಕ್ಷಾಂತರ ಭಕ್ತರು

Published 29 ಜನವರಿ 2024, 14:11 IST
Last Updated 29 ಜನವರಿ 2024, 14:11 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ಮುಗಿದು ಎರಡು ದಿನಗಳಾದರೂ ಮಠಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಲೇ ಇದ್ದಾರೆ. ಅವರೆಲ್ಲರಿಗೂ ಮಠವೇ ದಾಸೋಹದ ವ್ಯವಸ್ಥೆ ಮಾಡಿದೆ.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸೇವೆಗಾಗಿ ಬಂದಿರುವ ಜನರು ಹಗಲಿರುಳು ಎನ್ನದೇ ಅಡುಗೆ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧೆಡೆ ಪುರುಷರ ಹಾಗೂ ಮಹಿಳೆಯರು ಸೇವೆ ಮಾಡಲು ಬಂದಿದ್ದರು.

ಗಂಗಾವತಿ ಮಹಿಳಾ ಸದಸ್ಯರ ತಂಡದವರು ಗವಿಸಿದ್ಧೇಶ್ವರ ಸ್ವಾಮೀಜಿ ಕುರಿತಾದ ಹಾಡುಗಳನ್ನು ಹಾಡಿ ತರಕಾರಿಗಳನ್ನು ಕತ್ತರಿಸಿದರು. ಮಹಾದಾಸೋಹ ಆರಂಭವಾದ ದಿನದಿಂದಲೂ ಗ್ರಾಮೀಣ ಪ್ರದೇಶಗಳ ಜನ ಹಗಲಿರುಳು ಕೆಲಸ ಮಾಡಿ ಅಡುಗೆ ತಯಾರಿಸುತ್ತಿದ್ದಾರೆ. ಬೆಳಿಗ್ಗೆ ತರಕಾರಿ ಹೆಚ್ಚಿದ ಮಹಿಳೆಯರು ಮಧ್ಯಾಹ್ನ ಭಕ್ತರಿಗೆ ಅಡುಗೆ ಬಡಿಸಿದರು. ಭಾನುವಾರ ರಾತ್ರಿ ಭಕ್ತಿ ಹಿತಚಿಂತನಾ ಸಭೆ ಮುಗಿದ ಬಳಿಕವೂ ಲಕ್ಷಾಂತರ ಭಕ್ತರು ಮಠದ ಆವರಣದಲ್ಲಿ ನೆರೆದಿದ್ದರು.

ಅನ್ನ ತಯಾರಿಯಲ್ಲಿ ತೊಡಗಿದ್ದ ಬಾಣಸಿಗರು
ಅನ್ನ ತಯಾರಿಯಲ್ಲಿ ತೊಡಗಿದ್ದ ಬಾಣಸಿಗರು
ಭಕ್ತರಿಗೆ ನೀಡಲು ಬುಟ್ಟಿಯಲ್ಲಿ ಶೇಂಗಾ ಹೋಳಿಗೆ ತುಂಬುತ್ತಿರುವ ಚಿತ್ರಣ
ಭಕ್ತರಿಗೆ ನೀಡಲು ಬುಟ್ಟಿಯಲ್ಲಿ ಶೇಂಗಾ ಹೋಳಿಗೆ ತುಂಬುತ್ತಿರುವ ಚಿತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT