ಶುಕ್ರವಾರ, ಜನವರಿ 27, 2023
27 °C

ವೈಭವದ ಲಕ್ಷ ತುಳಸಿ ಅರ್ಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಇಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಲಕ್ಷ ತುಳಸಿ ಅರ್ಚನೆ ಮತ್ತು ರಾಯರ ಬೃಂದಾವನ ಪ್ರತಿಷ್ಠಾಪಿಸಿದ ರಘುವೀರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ವೈಭವದಿಂದ ಜರುಗಿತು.

ಮಠದಲ್ಲಿ ಕಾರ್ತಿಕ ದಾಮೋದರನಿಗೆ ಲಕ್ಷ ತುಳಸಿಯಿಂದ ಅರ್ಚನೆ ಮಾಡಲಾಯಿತು. ಸುಪ್ರಭಾತ, ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀನಿವಾಸ ಕಲ್ಯಾಣ ಪಾರಾಯಣ, ಗ್ರಾಮ ಪ್ರದಕ್ಷಣೆ, ನೈವೇದ್ಯ, ಹಸ್ತೋದಕ, ಬೆಂಗಳೂರಿನ ಅಂಬರೀಷಾಚಾರ್‌ ಅವರಿಂದ ಪ್ರವಚನ, ಹುಬ್ಬಳ್ಳಿಯ ಕೃಷ್ಣೇಂದ್ರ ವಾಡೇಕರ್‌ ಅವರಿಂದ ಭಕ್ತಿ ಸಂಗೀತ ಮತ್ತು ದಿಪೋತ್ಸವ ಹಮ್ಮಿಕೊಳ್ಳಲಾಗಿತ್ತು.

ದೀಪೋತ್ಸವ ಸಮಯದಲ್ಲಿ ಮಠದ ಆವರಣದಲ್ಲಿ ವಿದ್ಯುತ್‌ ದೀಪಗಳನ್ನು ಬಂದ್ ಮಾಡಿ ದೀಪಗಳನ್ನು ಹಚ್ಚಿ ಆವರಣದ ಅಂದ ಹೆಚ್ಚಿಸುವಂತೆ ಮಾಡಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು