ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ‘ಭ್ರಷ್ಟ ಸರ್ಕಾರಗಳಿಗೆ ಪಾಠ ಕಲಿಸಿ’

ಕ್ವಿಟ್ ಇಂಡಿಯಾ ಚಳವಳಿ: ನಿರುದ್ಯೋಗಿ ಯುವಜನರ ಹೋರಾಟ
Last Updated 10 ಆಗಸ್ಟ್ 2021, 4:01 IST
ಅಕ್ಷರ ಗಾತ್ರ

ಕೊಪ್ಪಳ: ಬ್ರಿಟಿಷರ ವಿರುದ್ಧ ಅಂದು ‌ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯಡಿ ಆರಂಭವಾದ ಹೋರಾಟದ ಮಾದರಿಯಲ್ಲಿ ಇಂದು ದೇಶವನ್ನು ಅಳುತ್ತಿರುವ ಜೀವ ವಿರೋಧಿ, ಜನ ವಿರೋಧಿ ಸರ್ಕಾರಗಳನ್ನು ಅಧಿಕಾರದಿಂದ ತೊಲಗಿಸಲು ಜನಾಂದೋಲನಾ ರೂಪಿಸಲು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ನಿರ್ದೇಶನದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದುಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.

ನಗರದತಹಶೀಲ್ದಾರ್ ಕಚೇರಿ ಆವರಣದಲ್ಲಿಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಿಪಿಐ ಇದರ ನೇತೃತ್ವ ವಹಿಸಿದ್ದರು.

ಮಹಿಳೆಯರ ಬಗ್ಗೆ ಉದ್ದುದ್ದ ಮಾತನಾಡುವ ಸರ್ಕಾರ, ಅವರಿಗೆ ತೀರಾ ಕಡಿಮೆ ಕೂಲಿ ನೀಡಿ ಶೋಷಣೆ ಮಾಡುತ್ತಿದೆ.ಕೊರೊನಾ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಹಲವಾರು ಸಮಸ್ಯೆ ಎದುರಿಸಿದ ಮುಗ್ದ ಜನರು ಜೀವ ಕಳೆದುಕೊಂಡರು. ಶಾಲೆಗಳು ಮುಚ್ಚಿ, ಆನ್ ಲೈನ್, ನೆಟ್ ವರ್ಕ್ ಸಮಸ್ಯೆಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಳವಳಿಯ ನೇತೃತ್ವವನ್ನು ಬಸವರಾಜ ಶೀಲವಂತರ, ಎ.ಬಿ.ದಿಂಡೂರ, ಎ.ಜಿ.ಮಣ್ಣೂರ, ರಮೇಶ ಚಿಕ್ಕೇನಕೊಪ್ಪ, ಗಾಳೆಪ್ಪ ಮುಂಗೋಲಿ, ಮಹಾಂತೇಶ್ ಕೋತಬಾಳ, ಶಿವಪ್ಪ ಹಡಪದ, ಮಮತಾಜ ಕಂದಗಲ್, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ಶೈಲಜಾ ಶಸಿಮಠ, ನಿರ್ಮಲ ಅಳವಂಡಿ, ಗಂಗಮ್ಮ, ವಿಮಲಾ ಮತ್ತೂರ ಹಾಗೂ ನೀಲಮ್ಮ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT