ಗುರುವಾರ , ಮಾರ್ಚ್ 30, 2023
32 °C

ವಾಲ್ಮೀಕಿ ಜಯಂತಿ, ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯ ಅಮ್ಜದ್ ಪಟೇಲ್‌ ಮಾತನಾಡಿ, ‘ವಾಲ್ಮೀಕಿ ಅವರು ರಾಮಾಯಣ ರಚನೆ ಮಾಡುವ ಮೂಲಕ ಜನರಿಗೆ ಮಾನವೀಯತೆಯ ಸಂದೇಶ ಸಾರಿದರು. ಭಾರತ ದೇಶದ ಮೊದಲನೇ ಕವಿ ಎಂದು ಹೆಸರಾದ ಅವರು ಸಂಸ್ಕೃತದಲ್ಲಿ ಬರೆದ ಮಹಾಕಾವ್ಯ ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿದೆ‘ ಎಂದರು.

ಗ್ರಾಮದ ಹಿರಿಯ ಕಲಾವಿದ ಮತ್ತು ಸಹಕಾರ ರಂಗದ ರಾಷ್ಟ್ರ ಪ್ರಶಸ್ತಿ ಪುರಸ್ಕತ ತೋಟಪ್ಪ ಕಾಮನೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶರಣಪ್ಪ ಕುರಿ, ಚಿನ್ನಪ್ಪರೆಡ್ಡಿ ರಡ್ಡೇರ, ಚಾಂದ್ ಪಾಷಾ ಖಿಲ್ಲೇದಾರ್, ಪಂಚಾಯಿತಿ ಉಪಾಧ್ಯಕ್ಷ ಗಾಳಪ್ಪ ಮಳ್ಳಿಕೇರಿ, ಪರಶುರಾಮ್ ಕೆರಳ್ಳಿ ಇದ್ದರು. ಶಿವಮೂರ್ತಿ ಗುತ್ತೂರು ಉಪನ್ಯಾಸ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.