ಮಂಗಳವಾರ, ಮೇ 24, 2022
30 °C

ಕೊಪ್ಪಳ | ಕಾರಟಗಿ: ಮಹಾದ್ವಾರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಪಟ್ಟಣದ ಶರಣಬಸವೇಶ್ವರ ಪುರಾಣ ಸಮಿತಿ ಟ್ರಸ್ಟ್‌ ₹3.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶರಣಬಸವೇಶ್ವರ, ವೀರಭದ್ರೇಶ್ವರ ಮಹಾದ್ವಾರವನ್ನು ಮಂಗಳವಾರ ಉದ್ಘಾಟಿಸಲಾಯಿತು.

ಪುರಸಭೆ ಸದಸ್ಯೆ ಸೌಮ್ಯ ಮಹೇಶ ಕಂದಗಲ್‌, ಮುತ್ತಯ್ಯಸ್ವಾಮಿ, ಅಮರಯ್ಯಸ್ವಾಮಿ ದೇವರಗುಡ್ಡ ನಾಗನಕಲ್‌ ಹಾಗೂ ಸೋಮನಾಥಸ್ವಾಮಿ ಗಣಾಚಾರಿ ಪೂಜೆ ಸಲ್ಲಿಸಿದರು.

ಪುರಾಣ ಸಮಿತಿಯ ಕುಳಗಿ ಗುಂಡಪ್ಪ, ಶರಣಪ್ಪ ಗದ್ದಿ, ಮಲ್ಲಿಕಾರ್ಜುನ ಕೊಟಗಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಶಾಸಕ ಬಸವರಾಜ ದಢೇಸೂಗೂರು, ಮಾಜಿ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ನಾಗಪ್ಪ ಸಾಲೋಣಿ, ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಗಿಲ್ಲೇಸುಗೂರ ಹಾಗೂ ಬಸನಗೌಡ ಚಂದ್ರೇಗೌಡ ಸೇರಿದಂತೆ ಅನೇಕ ಮುಖಂಡರನ್ನು ಸನ್ಮಾನಿಸಲಾಯಿತು.

ಸುಗೂರೇಶ ಬಪ್ಪೂರ, ಮಲ್ಲಿಕಾರ್ಜುನ ಕೊಟಗಿ ಮಾತನಾಡಿ,‘ಅನೇಕ ದಾನಿಗಳು ಮಹಾದ್ವಾರ ನಿರ್ಮಾಣಕ್ಕೆ ದೇಣಿಗೆ ನೀಡುವ ಭರವಸೆ ನೀಡಿದ್ದಾರೆ. ಸದ್ಯ ಶರಣಬಸವೇಶ್ವರ ಪುರಾಣ ಸಮಿತಿ ಟ್ರಸ್ಟ್‌ನಿಂದ ಹಣ ಖರ್ಚು ಮಾಡಿ ದ್ವಾರ ನಿರ್ಮಿಸಲಾಗಿದೆ.  ದಾನಿಗಳು ದೇಣಿಗೆ ಸಕಾಲಕ್ಕೆ ನೀಡಬೇಕು’ ಎಂದು ಮನವಿ ಮಾಡಿದರು.

ಶರಣಬಸವೇಶ್ವರ ಪುರಾಣ ಸಮಿತಿ ಮುಖ್ಯಸ್ಥರು, ಸದಸ್ಯರು ಸೇರಿದಂತೆ ಅನೇಕ ಗಣ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.