ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡ್ಡಮ್ಮದೇವಿ ಜಾತ್ರೆ ಇಂದಿನಿಂದ

ಮೈನಹಳ್ಳಿ: 20ರಿಂದ ರಾಜ್ಯಮಟ್ಟದ ಭಜನಾ ಸ್ಪರ್ಧೆ
Last Updated 18 ಮೇ 2022, 4:03 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಮೈನಹಳ್ಳಿ ಗ್ರಾಮದಲ್ಲಿ ನೆಲೆಸಿದ ಶಿವಶರಣೆ ಬುಡ್ಡಮ್ಮದೇವಿಯ ಜಾತ್ರೆಮೇ 18 ರಿಂದ 21 ರವರೆಗೆ ನಡೆಯಲಿದ್ದು ಮಹಾದ್ವಾರ ಉದ್ಘಾಟನೆ, ಅಡ್ಡಪಲ್ಲಕ್ಕಿ ಉತ್ಸವ, ಹಾಗೂ ಮಹಾ ರಥೋತ್ಸವ, ಧರ್ಮ ಸಭೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಮೇ 20ರಂದುಜಾತ್ರಾ ಮಹೋತ್ಸವದ ನಿಮಿತ್ತ ಹೊನಲು ಬೆಳಕಿನ ರಾಜ್ಯ ಮಟ್ಟದ ಭಜಾನ ಸ್ಪರ್ಧೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 20 ರಿಂದ 30 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತರಿಗೆ ಪ್ರಥಮ ಬಹುಮಾನ ₹21 ಸಾವಿರ, ದ್ವಿತೀಯ ₹11ಸಾವಿರ, ತೃತೀಯ ₹8001, ಚತುರ್ಥ ₹5001 ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಮುಂಡರಗಿ ಸಂಸ್ಥಾನಮಠದ ಡಾ. ಅನ್ನದಾನ ಸ್ವಾಮೀಜಿ, ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ, ಬಳಗಾನೂರು ಶಿವಶಾಂತವೀರ ಶರಣರು, ಅಳವಂಡಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ,ಯತ್ನಟ್ಟಿ ರುದ್ರಮುನಿ ದೇವರು, ಚಿನ್ಮಯ ಸ್ವಾಮೀಜಿ ಪಟ್ಟದ್ದೇವರು ಕೂಲಹಳ್ಳಿ ಸಾನ್ನಿಧ್ಯ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಪಾಲ್ಗೊಳ್ಳುವರು.

ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂಡವು ಹೆಸರು ನೋಂದಾಯಿಸಬಹುದು. ಕಾರ್ಯಕ್ರಮದಲ್ಲಿ ತತ್ವಪದ ಹಾಗೂ ವಚನ ಪದಗಳನ್ನು ಹಾಡಲು ಮಾತ್ರ ಅವಕಾಶ ನೀಡಲಾಗಿದ್ದು 8 ನಿಮಿಷಗಳ ಕಾಲಾವಕಾಶ ಇರುತ್ತದೆ. ತಂಡದಲ್ಲಿ ಒಟ್ಟು 8 ಜನ ಭಾಗವಹಿಸಬಹುದು.ಎಲ್ಲ ಕಲಾವಿದರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ-9113265454, 9844749408 ಸಂಪರ್ಕಿಸಬಹುದು.

ಮುಖಂಡ ಅಜಯಗೌಡ ಪಾಟೀಲ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ, ಮಹೇಂದ್ರಪ್ಪ ಮೂಲಿಮನಿ, ಬೋಜಪ್ಪ ಹಳ್ಖಿ, ಭರಮಪ್ಪ ಬಾಸಿಂಗದಾರ, ಶಂಕ್ರಪ್ಪ ಬೂದಿ, ಹೊಳಿಬಸಯ್ಯ ಸಾಲಿ, ದೇವಣ್ಣ ಕತ್ತಿ, ಬಿಸರಹಳ್ಳಿಗ್ರಾಪಂ ಅಧ್ಯಕ್ಷ ಸಕ್ರಡ್ಡಿ ಹ್ಯಾಟಿ, ಮರಿಶಾಂತವೀರ ಚಕ್ಕಡಿ, ವೀರಣ್ಣ ಮೂಲಿಮನಿ, ಸುಶೀಲಮ್ಮ ಕೊಪ್ಪಳ, ಶಿವಪ್ಪ ಹನುಮವ್ವ, ವಿದ್ಯಾಧರ ಹಿರೇಗೌಡ್ರ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT