ಸೋಮವಾರ, ಜುಲೈ 26, 2021
26 °C

ಸಹಾಯಧನಕ್ಕಾಗಿ ಶಾಸಕರಿಗೆ ಪುರೋಹಿತರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು (ಕೊಪ್ಪಳ): ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ಜಂಗಮ ಸಮಾಜದ ಪುರೋಹಿತರಾಗಿರುವ ಅರ್ಚಕರಿಗೆ ಸರ್ಕಾರದಿಂದ ಸಹಾಯಧನ ನೀಡಬೇಕೆಂದು ಶಾಸಕ ಹಾಲಪ್ಪ ಆಚಾರ್ ಅವರಿಗೆ ಜಂಗಮ ಸಮಾಜದವರು ಮಂಗಳವಾರ ಮನವಿ ಸಲ್ಲಿಸಿದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ದೇವಸ್ಥಾನಗಳು ಮುಚ್ಚಿವೆ. ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಜಂಗಮ ಸಮಾಜದ ಪೂರೋಹಿತರು ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ದೇವಸ್ಥಾನ ಬಂದ್ ಆಗಿರುವ ಹಿನ್ನೆಲೆಯಲ್ಲಿ ಅವರ ಜೀವನ ನಡೆಸಲು ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅನೇಕ ವರ್ಗದವರಿಗೆ ₹ 5,000 ಸಹಾಯಧನ ನೀಡುತ್ತಿದೆ. ಅದರಂತೆ ನಮಗೂ ಸಹ ಸಹಾಯಧನ ನೀಡಬೇಕೆಂದು ಮನವಿಯಲ್ಲಿ ತಿಳಿಸಿದರು.

ಬಸಯ್ಯ ಹಿರೇಮಠ, ರೇಣುಕ ಪ್ರಸನ್ ಹಿರೇಮಠ, ಶಾಂತಯ್ಯ, ಈಶ್ವರಯ್ಯ ಕೋತಬಾಳಮಠ, ಗುರುಮೂರ್ತೆಯ್ಯ, ಕಳಕಯ್ಯ, ಮಲ್ಲಿಕಾರ್ಜುನ್, ಶರಣಯ್ಯ, ಸಿದ್ದಯ್ಯ, ನೀಲಕಂಠಯ್ಯ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.