ಕ್ರೀಡೆಗಳಿಂದ ಮಾನಸಿಕ ಬೆಳವಣಿಗೆ

7
ಕನಕಗಿರಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ

ಕ್ರೀಡೆಗಳಿಂದ ಮಾನಸಿಕ ಬೆಳವಣಿಗೆ

Published:
Updated:
Deccan Herald

ಕನಕಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿರೇಖೇಡ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಸಮೀಪದ ಹಿರೇಖೇಡ ಗ್ರಾಮದ ಮೈದಾನದಲ್ಲಿ ಬುಧವಾರ ಕನಕಗಿರಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ನಡೆಯಿತು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ನಿಧನಕ್ಕೆ ಸರ್ಕಾರ ಶೋಕಾಚರಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ತಿಪ್ಪಣ್ಣ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ಮಾತನಾಡಿದ ಅವರು, ‘ವಿದ್ಯಾರ್ಥಿ ಸಮುದಾಯ ಗೆಲುವಿಗಾಗಿ ಅಡ್ಡ ಮಾರ್ಗ ಹಿಡಿಯದೆ ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಆಟಗಳನ್ನು ಆಡಬೇಕು’ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ಇಮಾಮಸಾಬ ಮಾತನಾಡಿ, ಸೋಲು ಗೆಲುವಿನ ಸೋಪಾನವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸತ್ಯ, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಣ್ಣ ಸಿದ್ದೇಶ್ವರ ಮಾತನಾಡಿ, ‘ಕ್ರೀಡೆಗಳಿಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಅವಶ್ಯಕ ಹಾಗಾಗಿ ಯುವಕರು ದೇಶಿಯ ಕ್ರೀಡೆಗಳಿಗೆ ಒತ್ತು ನೀಡಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮುದಿಯಪ್ಪ ನಾಯಕ, ಸದಸ್ಯರಾದ ಗುರುನಾಥಪ್ಪ, ನಾಗಪ್ಪ, ಅಂಬಮ್ಮ, ಅಭಿವೃದ್ಧಿ ಅಧಿಕಾರಿ ದಸ್ತಗೀರಸಾಬ ಎಂ.ಬಡಿಗೇರ, ಎಪಿಎಂಸಿ ಮಾಜಿ ನಿರ್ದೇಶಕ ಈಶಪ್ಪ ಹೊಸ್ಗೇರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜಂಬಣ್ಣ, ಮುದುಕೇಶ, ಪ್ರಮುಖರಾದ ಗ್ಯಾನಪ್ಪ ಗಾಣದಾಳ, ವಿರುಪಣ್ಣ ಶೆಟ್ಟರ್, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಕಾಂತ ರಾಥೋಡ್, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ.  ದೈಹಿಕ ಶಿಕ್ಷಣ ಶಿಕ್ಷಕರಾದ ಶಾಮೀದಾಬ ಲೈನದಾರ, ಬೋಗೇಶ, ವೆಂಕಟರಡ್ಡಿ ಇದ್ದರು. 22ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !