ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗೇದಾಳ: ಕೋತಿ ದಾಳಿ, ಆತಂಕ

Last Updated 30 ಮಾರ್ಚ್ 2021, 6:38 IST
ಅಕ್ಷರ ಗಾತ್ರ

ಹಗೇದಾಳ (ಕಾರಟಗಿ): ತಾಲ್ಲೂಕಿನ ಹಗೇದಾಳ ಗ್ರಾಮದಲ್ಲಿ ಒಂದು ವಾರದಿಂದ ಕೋತಿಯೊಂದು ಗ್ರಾಮಸ್ಥರ ಮೇಲೆ ದಾಳಿ ನಡೆಸುತ್ತಿದೆ. ಹಲವರು ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗುವ ಮಹಿಳೆಯರು ಹಾಗೂ ಕೃಷಿ ಕೆಲಸದಲ್ಲಿ ನಿರತರಾದವರ ಮೇಲೆ ದಾಳಿ ನಡೆಸಿದೆ.

‘ಗ್ರಾಮದ ಖಾದರ ಪಾಷಾ ಎಂಬುವವರ ಮೇಲೆ ಕೋತಿ ಭಾನುವಾರ ದಾಳಿ ನಡೆಸಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೋಗಾಪುರ ದೊಡ್ಡಪ್ಪ, ಲಕ್ಷ್ಯಪ್ಪ, ದುರುಗಪ್ಪ ನಾಯಕ ಸೇರಿದಂತೆ ಇನ್ನಿತರರು ಕೋತಿ ದಾಳಿಗೆ ಒಳಗಾಗಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಗ್ರಾಮದ ಯುವಕರ ತಂಡ ಕೋತಿ ಹಿಡಿಯಲು ಪ್ರಯತ್ನ ನಡೆಸಿ ವಿಫಲವಾಯಿತು.

‘ಹುಳ್ಕಿಹಾಳ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕ್ರಮಕ್ಕೆ ಮುಂದಾಗುವಂತೆ ಮನವಿ ಮಾಡಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದು ನಮ್ಮ ಕೆಲಸವಲ್ಲ ಎಂದು ಹೇಳುತ್ತಿದ್ದಾರೆ. ಗ್ರಾಮಸ್ಥರು ಹಣ ಸಂಗ್ರಹಿಸಿದರೆ ಹೊಸಪೇಟೆಯಿಂದ ಕೋತಿ ಹಿಡಿಯುವ ತಂಡ ಕರೆಸುತ್ತೇವೆ ಎಂದು ಹೇಳುತ್ತಿದ್ದಾರೆ’ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ.

ಗ್ರಾಮದ ಯುವಕರು ಕಲ್ಲು, ಬಡಿಗೆ ಹಿಡಿದು ಗ್ರಾಮದೆಲ್ಲೆಡೆ ಸಂಚರಿಸುತ್ತಿದ್ದಾರೆ. ಕೋತಿ ಹಿಡಿಯಲು ಕಾವಲು ಕಾಯಲು ಮುಂದಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT