ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಸ್‌ ಘಟಕ ಉದ್ಘಾಟನೆ

Last Updated 1 ಜನವರಿ 2022, 12:24 IST
ಅಕ್ಷರ ಗಾತ್ರ

ಕೊಪ್ಪಳ: ‘ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸೇವಾ ಮನೋಭಾವ ಬೆಳೆಯುತ್ತದೆ’ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರದೀಪ್‌ ಕುಮಾರ.ಯು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಎನ್‌ಎಸ್‌ಎಸ್‌ ಘಟಕ ಉದ್ಘಾಟಿಸಿ ಮಾತನಾಡಿ,‘ಎನ್‌ಎಸ್‌ಎಸ್‌ನಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿನಿಯರಲ್ಲಿ ಜೀವನ ಶೈಲಿ, ಶಿಸ್ತು, ಸಂಯಮ, ಸಮಾಜದ ಬಗ್ಗೆ ಕಾಳಜಿ, ಅರೋಗ್ಯದ ಬಗ್ಗೆ ಜಾಗೃತಿ ಉಂಟಾಗುತ್ತದೆ. ವಿದ್ಯಾರ್ಥಿನಿಯರು ಪರಿಸರ ಸಂರಕ್ಷಣೆ, ಪ್ರಕೃತಿ ವಿಕೋಪ, ಕೊರೊನಾ, ಲಸಿಕೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಗಣಪತಿ ಕೆ ಲಮಾಣಿ ಮಾತನಾಡಿ,‘ವಿದ್ಯಾರ್ಥಿನಿಯರಿಗೆ ಸ್ವಂತ ವ್ಯಕ್ತಿತ್ವ ಮತ್ತು ಸಂಯಮದ ಜತೆಗೆ ಶಿಕ್ಷಣ ಬೇಕು. ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಡಾ.ಹುಲಿಗೆಮ್ಮ,ಬಿ. ಮಹಾಂತೇಶ ಮುಧೋಳ ಹಾಗೂ ಸುಮಿತ್ರ ಎಸ್.ವಿ ಮಾತನಾಡಿದರು.

ನಾಗರತ್ನ ಬಿ.ತಮ್ಮಿನಾಳ, ಬಸವರಾಜ ಅರೇರು ಹಾಗೂ ಸೌಮ್ಯ ಹಿರೇಮಠ ಇದ್ದರು.

ಎನ್‌ಎಸ್‌ಎಸ್‌ ಸಂಯೋಜಕ ಡಾ.ನರಸಿಂಹ ಮಾತನಾಡಿದರು. ಸುಧಾ ಇಂಗಳದಾಳ ನಿರೂಪಿಸಿದರು. ನಿವೇದಿತಾ ಸ್ವಾಗತಿಸಿದರು. ಅಂಬಿಕಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT