ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರ

Last Updated 24 ಸೆಪ್ಟೆಂಬರ್ 2022, 12:35 IST
ಅಕ್ಷರ ಗಾತ್ರ

ಕೊಪ್ಪಳ: ‘ದೇಶದ ಅಭಿವೃದ್ಧಿ ಗಾಮಗಳ ಮೇಲೆ ನಿಂತಿದೆ. ಅಂತಹ ಗ್ರಾಮಗಳನ್ನು ಉದ್ಧಾರ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ’ ಎಂದು ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟ್‌ ಕಾರ್ಯದರ್ಶಿ ಡಾ.ಆರ್.ಮರೇಗೌಡ ಹೇಳಿದರು.

ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ ‘ವಿದ್ಯಾರ್ಥಿಗಳು ಗ್ರಾಮಗಳ ಕಡೆಗೆ ತಿರುಗಬೇಕಿದೆ. ಅಲ್ಲಿನ ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ ಅರಿಯಬೇಕು’ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಜಿ.ಎಂ.ಭೂಸನೂರುಮಠ, ಹಲಗೇರಿ ಗ್ರಾಮ ಪಂಚಾಯತಿ ಪಿಡಿಒ ಅಶೋಕ ರಾಂಪೂರ, ಅಧ್ಯಕ್ಷೆ ಶರಣಮ್ಮ ತಳವಾರ.ಎನ್‌ಎಸ್‌ಎಸ್‌ಯೋಜನಾಧಿಕಾರಿ ಕಮಲ ಅಳವಂಡಿ, ಪ್ರಾಚಾರ್ಯ ಡಾ.ವೀರೇಶಕುಮಾರ ಎನ್.ಎಸ್ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯತಿ ಸದಸ್ಯರಾದ ಸುಭಾಷ್ ಹೂಗಾರ, ಯಲ್ಲಪ್ಪ ಒಜನಹಳ್ಳಿ, ಕಂದಾಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿ, ಗ್ರಾಮದ ಮುಖಂಡರಾದ ಬಸನಗೌಡ ಪಾಟಿಲ, ಕುಬೇರಪ್ಪ ಗೊರವರ್, ಶರಣಪ್ಪ ಬಿನ್ನಾಳ್, ಸಿದ್ಧಪ್ಪ ಸಿಂದೋಗಿ, ಶರಣಯ್ಯ ಹಿರೇಮಠ ಉಪನ್ಯಾಸಕರಾದ ವೀರೇಶ ಕಾತರಕಿ, ಕೆ.ಎಸ್.ದಂಡಿನ್. ಸಂತೋಷ್ ಗೌಡ ಮತ್ತು ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT