ಕೊಪ್ಪಳ: ಮಲೇಷ್ಯಾದಲ್ಲಿ ನಡೆದ ಗೋಲ್ಡನ್ ಟೈಗರ್ ಫೋಟೊ ಸರ್ಕ್ಯೂಟ್ ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ಕುರಿಗಾಯಿ ಬಾಲಕ’ ಶೀರ್ಷಿಕೆಯ ಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ.

ಗ್ರಾಮೀಣ ಸೊಗಡಿನ ಚಿತ್ರದಲ್ಲಿ ಕುರಿಗಾಹಿ ಬಾಲಕನೊಬ್ಬ ಕುರಿಗಳನ್ನೆಲ್ಲ ಮೇಯಿಸಿಕೊಂಡು ಮನೆಯತ್ತ ಹೊರಟ ಸನ್ನಿವೇಶವನ್ನು ಇಳಿ ಸಂಜೆಯ ವೇಳೆ ಕಪ್ಪು-ಬಿಳುಪು ಮಾಧ್ಯಮದಲ್ಲಿ ಸೆರೆಹಿಡಿಯಲಾಗಿದೆ. ಕುರಿಗಳ ಹಿಂಡು, ಅವುಗಳ ನಡಿಗೆಯಿಂದೆದ್ದ ದೂಳು, ಇಳಿ ಸಂಜೆಯ ಮಂದ ಬೆಳಕು ಚಿತ್ರಕ್ಕೆ ಮೆರುಗು ನೀಡಿವೆ.

ಬೇರೆ ಬೇರೆ ದೇಶಗಳ 350ಕ್ಕೂ ಹೆಚ್ಚು ಜನ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜುಲೈ 20ರಂದು ಕ್ವಾಲಾಲಂಪುರದಲ್ಲಿ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.