ಕೊಪ್ಪಳ: ‘ಕುಂಬಾರ ಸಮಾಜದವರು ಕಾಯಕಯೋಗಿಗಳಾಗಿದ್ದಾರೆ. ಬೇರೆ ಸಮಾಜದವರೊಂದಿಗೆ ಸಹೋದರತ್ವದಿಂದ ಬಾಳುತ್ತಿದ್ದಾರೆ. ಇದು ಮನುಕುಲಕ್ಕೆ ಇರಬೇಕು. ಇದನ್ನೇ ಸಂತ ಸರ್ವಜ್ಞರು ಸಾರಿದ್ದಾರೆ’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಕುಷ್ಟಗಿ ರಸ್ತೆಯಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುಂಬಾರ ಸಂಘ ಮತ್ತು ಜಿಲ್ಲಾ ಕುಂಬಾರ ಸಮಾಜದ ಆಶ್ರಯದಲ್ಲಿ ಸರ್ವಜ್ಞ ಜಯಂತಿ ನಿಮಿತ್ತ ನಡೆದ ಸಮುದಾಯ ಭವನ ಕಟ್ಟಡದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿ ‘ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದನ್ನು ಕುಂಬಾರರು ಹೇಳಿಕೊಂಡು ಬಂದಿದ್ದಾರೆ. ಜಾತಿಯನ್ನು ದೇವರು ಸೃಷ್ಟಿಮಾಡಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಾತಿಯನ್ನು ಹುಟ್ಟುಹಾಕಿದ್ದಾರೆ’ ಎಂದರು. ಭವನ ನಿರ್ಮಾಣಕ್ಕೆ ಈಗಾಗಲೇ ₹50 ಲಕ್ಷ ನೀಡಿದ್ದೇನೆ. ಇನ್ನೂ ₹50 ಲಕ್ಷ ಕೊಡುತ್ತೇನ ಎಂದು ಭರವಸೆ ನೀಡಿದರು.

ಸಂಸದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕಳಕಪ್ಪ ಕುಂಬಾರ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ, ಶಿವಕುಮಾರ ಪಾವಲಿಶೆಟ್ಟರ್, ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕುಂಬಾರ, ತಾಲ್ಲೂಕು ಅಧ್ಯಕ್ಷ ಚನ್ನಪ್ಪ ಕುಂಬಾರ, ಹಿರೇಸಿಂಧೋಗಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಭಾಕರ ಕುಂಬಾರ, ಗೌರವಾಧ್ಯಕ್ಷ ರಾಮಣ್ಣ ಕುಂಬಾರ, ಭೋಜಪ್ಪ ಕುಂಬಾರ, ಮಲ್ಲಪ್ಪ ಕುಂಬಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.