ಯಲಬುರ್ಗಾ: ‘ಗುಣಾತ್ಮಕ, ನೈತಿಕ ಹಾಗೂ ಕ್ರಿಯಾತ್ಮಕ ಶಿಕ್ಷಣದಿಂದ ಮಾತ್ರ ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸಬಹು ದು. ಜೊತೆಗೆ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸಿದಂತಾಗುತ್ತದೆ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ.ಡಾಣಿ ಹೇಳಿದರು.

ಪಟ್ಟಣದ ಜ್ಞಾನಸಾಗರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,‘ಎಲ್ಲ ಸಾಧನೆಗೆ ಮೂಲ ಶಿಕ್ಷಣ. ಇದನ್ನು ಪರಿಣಾಮಕಾರಿಯಾಗಿ ಕಲ್ಪಿಸುವುದು ಮತ್ತು ಪಡೆದುಕೊಳ್ಳುವುದು ಅತ್ಯವಶ್ಯಕ. ಭವಿಷ್ಯತ್ತಿನಲ್ಲಿ ಹಲವು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಲು ಶಿಕ್ಷಣ ಅವಶ್ಯಕ’ ಎಂದು ಹೇಳಿದರು.

ಹುಲಿಕಲ್ ನಟರಾಜ ಮಾತನಾಡಿ,‘ಮಕ್ಕಳು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯಾವುದನ್ನೂ ಸುಲಭವಾಗಿ ಒಪ್ಪಿಕೊ ಳ್ಳಬಾರದು. ಅದರ ಸಂಪೂರ್ಣ ಆಗುಹೋಗುಗಳ ಬಗ್ಗೆ ತಿಳಿದುಕೊಂಡು ನಿರ್ಧಾರಕ್ಕೆ ಬರುವುದನ್ನು ರೂಢಿಸಿಕೊಂಡರೆ ಮಾತ್ರ ವೈಜ್ಞಾನಿಕ ಮತ್ತು ವೈಚಾರಿಕ ಧೋರಣೆಗಳು ಒಡಮೂಡಲು ಸಾಧ್ಯ’ ಎಂದರು.

ನರೇಗಲ್ನ ಎಸ್.ಎ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಅರವಿಂದ ಸಜ್ಜನರ ಅವರು ನಡೆಸಿಕೊಟ್ಟ ಸಮ್ಮೋಹನ ಕಾರ್ಯಕ್ರಮ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಗಮನಸೆಳೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿ.ಎಚ್.ಪೊಲೀಸ್ ಪಾಟೀಲ, ಶ್ರೀಕಾಂತ ಸಜ್ಜನವರ, ಜಿ.ಪಂ ಮಾಜಿ ಉಪಾಧ್ಯಕ್ಷ ವೆಂಕಣ್ಣ ಯರಾಶಿ ಮಾತನಾಡಿದರು.

ಮುಖಂಡರಾದ ಶೇಖರಗೌಡ ಉಳ್ಳಾಗಡ್ಡಿ, ವೀರಣ್ಣ ನಿಂಗೋಜಿ, ಶರಣಪ್ಪ ಕೊಪ್ಪಳ, ಬಸವರಾಜ ಮಾಸ್ತಿ, ವೀರಣ್ಣ ಹುಬ್ಬಳ್ಳಿ, ಎಸ್.ವಿ.ಧರಣಾ, ಜಸ್ವಂತರಾಜ ಜೈನ್, ನಾಗರಾಜ ಕೊಪ್ಪಳ, ಶಿವಕುಮಾರ ಕಳ್ಳಿಮಠ, ವಿನಯ ಹಿರೇಮಠ, ಮಹಾಂತೇಶ ಗೌಡ್ರ, ಪುಷ್ಪಾ, ಸವಿತಾ, ಯಲ್ಲಮ್ಮ, ತೇಜಸ್ವಿನಿ, ಕವಿತಾ, ಬಸವರಾಜ ನಿಡಶೇಸಿ, ಸೌಮ್ಯಾ ಸೇರಿ ಅನೇಕರು ಹಾಜರಿದ್ದರು.