ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರು ದಶಕಗಳ ಕನಸು ನನಸು’

ಗಂಗಾವತಿ: 6 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಭೂಮಿಪೂಜೆ
Last Updated 11 ಅಕ್ಟೋಬರ್ 2021, 2:56 IST
ಅಕ್ಷರ ಗಾತ್ರ

ಗಂಗಾವತಿ: ಮೂರು ದಶಕಗಳಿಂದ ಗಂಗಾವತಿ ತಾಲ್ಲೂಕು ವ್ಯಾಪ್ತಿಯ ಆರು ಕೆರೆಗಳ ನೀರು ತುಂಬಿಸುವ ಯೋಜನೆಯ ಕನಸು ಇಂದು ಮುಕ್ಕುಂಪಿ ಕೆರೆಯಲ್ಲಿ ಭೂಮಿ ಪೂಜೆ ಮಾಡುವ ಮೂಲಕ‌ ನನಸಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಅಚಾರ್ ಹೇಳಿದರು.

ತಾಲ್ಲೂಕಿನ ಮುಕ್ಕುಂಪಿ (ಹೇಮಗುಡ್ಡ ದೇವಸ್ಥಾನ ಸಭಾಂಗಣದಲ್ಲಿ) ಭಾನುವಾರ ನಡೆದ ಗಂಗಾವತಿ ವಿಧಾನಸಭಾ ಕ್ಷೇತ್ರದ ಆರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಈ ಭಾಗದಲ್ಲಿನ ರೈತರ ಬಹುಬೇಡಿಕೆ ಕನಸು ಕೆರೆಗಳು ಭರ್ತಿಯಾಗುವುದು.‌ ಇದನ್ನು‌ ಮನಗಂಡು, ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಈ ಕಾಮಗಾರಿ ಕೈಗೆತ್ತಿಕೊಂಡು ಕೆರೆಗಳನ್ನು ತುಂಬಿಸಲು ಹೊರಟಿರುವ ಈ ಭಾಗದ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಈಗಾಗಲೇ ಬಿಜೆಪಿ ಸರ್ಕಾರ ರೈಸ್ ಪಾರ್ಕ್, ವಿಮಾನ ನಿಲ್ದಾಣ, ಅಟಿಕೆ ಕ್ಲಸ್ಟರ್ ಕಂಪನಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ಜಿಲ್ಲೆಗೆ ತರುವ ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುವ ಕನಸು ಸರ್ಕಾರ ಹೊಂದಿದೆ ಎಂದರು.

ಶಾಸಕ ಪರಣ್ಣ ಮುನವಳ್ಳಿ ಮಾನತಾಡಿ, ಕೆರೆ ತುಂಬಿಸುವ ಯೋಜನೆ ಕಾಮಗಾರಿ ತುಂಬ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇವು ತುಂಬಿದರೆ ರೈತರಿಗೆ ವರ್ಷಕ್ಕೆ ಎರಡು ಬೆಳೆ ಸಿಗುವ ಜೊತೆಗೆ ಅಂರ್ತಜಲ ಹೆಚ್ಚಾಗಲಿತ್ತು. ಆದ್ದರಿಂದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಸಮಾಲೋಚಿಸಿ, ಈ ಕಾಮಗಾರಿ
ಕೈಗೆತ್ತಿಕೊಳ್ಳಾಗಿದೆ ಎಂದರು.

ತುಂಗಾಭದ್ರ ನದಿಯಿಂದ ಗಂಗಾವತಿ ತಾಲ್ಲೂಕಿನ ಮುಕ್ಕುಂಪಿ, ಚಿಕ್ಕಬೆಣಕಲ್, ಹಿರೆಬೆಣಕಲ್, ಲಿಂಗದಳ್ಳಿ, ಎಚ್.ಜಿ ರಾಮುಲು ನಗರದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೆ ₹93 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಹೊರತು ಪಡಿಸಿ, ತಾಲ್ಲೂಕಿನಲ್ಲಿ ಇನ್ನೂ 33 ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ನೀರು ತುಂಬಿಸಲು ಸರ್ಕಾರಕ್ಕೆ₹430 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಕಾಮಗಾರಿ ಪಡೆಯುವ ಗುತ್ತೆದಾರರು ರೈತರ ಮತ್ತು ಗ್ರಾಮಸ್ಥರ ಸಲಹೆಗಳನ್ನು ಪಡೆದು ಗುಣಮಟ್ಟದ ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮುಕ್ಕಿಂಪಿ ಕೆರೆ ಭೂಮಿ ಪೂಜೆ ವೇಳೆಯಲ್ಲಿ ಉಸ್ತವಾರಿ ಸಚಿವ, ಸಂಸದ, ಶಾಸಕರು‌ ಬಾಗಿನ ಅರ್ಪಿಸಿದರು.

ಈ ವೇಳೆಯಲ್ಲಿ ಶಾಸಕ ಬಸವರಾಜ ದಢೆಸೂಗೂರ್, ಮಾಜಿ ಎಂಎಲ್ಸಿ, ಶ್ರೀನಾಥ್, ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಜಿ.ಪಂ ಸದಸ್ಯ ಸಿದ್ದರಾಮಸ್ವಾಮಿ, ಚೆನ್ನಮ್ಮ ಮಳಗಿ,ಅಮರೇಗೌಡ, ಹಮನಪ್ಪ ವಿಠಲಾಪುರ, ರಾಮಣ್ಣ ಚೌಡ್ಕಿ, ಗ್ರಾ.ಪಂ ಅಧ್ಯಕ್ಷೆ ತಿಮ್ಮಮ್ಮ, ಪರಶುರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT