ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಮಣ್ಣು ಕಳ್ಳ ಎಂಬುದು ಗೊತ್ತು: ಸಚಿವ ತಂಗಡಗಿ

Published 26 ಏಪ್ರಿಲ್ 2024, 15:52 IST
Last Updated 26 ಏಪ್ರಿಲ್ 2024, 15:52 IST
ಅಕ್ಷರ ಗಾತ್ರ

ಕನಕಗಿರಿ: ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಮಣ್ಣು‌ ಕಳ್ಳತನ ಮಾಡಿರುವುದು‌ ಇಡೀ ಜಗತ್ತಿಗೆ ಗೊತ್ತಿದೆ. ಅದನ್ನು‌ ಮರೆತು ತಮ್ಮನ್ನು‌ ಕಂತ್ರಿ ಎಂದು ಜರಿಯುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಲೋಕಸಭಾ‌ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರೆಡ್ಡಿ ಅವರು ತಮ್ಮ ಹಾಗೂ ಪಕ್ಷದ ಬಗ್ಗೆ ಸಲ್ಲದ ಮಾತುಗಳನ್ನು ಆಡಿದರೆ ಅವರ ಜಾತಕವನ್ನು ಬಯಲಿಗೆ ಎಳೆಯುತ್ತೇವೆ’ ಎಂದು ತಿರುಗೇಟು ನೀಡಿದರು.

‘ಉದ್ಯೋಗ ಕೊಡಿ ಅಂತ ಯುವಕರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅಂಗಲಾಚಿದರೆ ಪಕೋಡ ಮಾರಾಟ ಮಾಡಿ ಎಂದು ಅಪಹಾಸ್ಯ ಮಾಡಿದ್ದಾರೆ’ ಎಂದರು.

ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ‘ತಾವು ಹಾಗೂ ತಮ್ಮ‌ ತಂದೆ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದು ಪಕ್ಷ ಮತ್ತೊಮ್ಮೆ ಅವಕಾಶ‌ ನೀಡಿದೆ. ಈ ಸಲ ಆಯ್ಕೆ ಮಾಡಿ ಜನಸೇವೆಗೆ ಮತ್ತಷ್ಟು ಅವಕಾಶ‌ ನೀಡಬೇಕು’ ಎಂದು ಕೋರಿದರು.

ಸಂಸದ ಕರಡಿ ಸಂಗಣ್ಣ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಗಂಗಾಧರಸ್ವಾಮಿ, ಶರಣೆಗೌಡ ಮಾಲಿಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಹನುಮೇಶ ನಾಯಕ, ಅಮರೇಶ‌ ಗೋನಾಳ, ಪಕ್ಷದ ವಕ್ತಾರ ಶರಣಬಸಪ್ಪ ಭತ್ತದ, ತಾ.ಪಂ. ಮಾಜಿ ಅಧ್ಯಕ್ಷರಾದ ಹೊನ್ನುರುಸಾಬ ಮೇಸ್ತ್ರೀ, ವಿರೂಪಾಕ್ಷಗೌಡ, ಬಸಂತಗೌಡ, ಮಲ್ಲಿಕಾರ್ಜುನ ಗೌಡ, ಮಾಧ್ಯಮ‌ ವಕ್ತಾರೆ ಶೈಲಜಾ ಹಿರೇಮಠ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಪಟ್ಟಣ ಪಂಚಾಯಿತಿ ಸದಸ್ಯರು,‌ವಿವಿಧ ಘಟಕಗಳ ಅಧ್ಯಕ್ಷರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT