ಸೋಮವಾರ, ಸೆಪ್ಟೆಂಬರ್ 27, 2021
20 °C

ಸಾಮಾಜಿಕ ಕಳಕಳಿಯ ಪುಸ್ತಕ ಸಂಸಾರದಲ್ಲಿ ಸಾಮರಸ್ಯ: ತೋಂಟದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ, ಸಾಹಿತಿ ಜಿ.ಎಸ್‌.ಗೋನಾಳ ಅವರ 'ಸಂಸಾರದಲ್ಲಿ ಸಾಮರಸ್ಯ' ಕೃತಿಯನ್ನು ಗದುಗಿನ ತೋಂಟದಾರ್ಯಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಬಿಡುಗಡೆ ಮಾಡಿದರು.

ಮೈಸೂರಿನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ವನಜ್ಯೋತಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೊ.ರು.ಚ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, 'ಪುಸ್ತಕಗಳು ಸಮಾಜದ ದಾರಿ ದೀಪ ಇದ್ದ ಹಾಗೆ’. ಗೋನಾಳರ ಕೃತಿ ನಾಗರಿಕ ಸಮಾಜಕ್ಕೆ ಅತ್ಯುತ್ತಮವಾದ ಕೈಗನ್ನಡಿಯಾಗಿದೆ' ಎಂದರು.

ಚಲನಚಿತ್ರ ನಟರಾದ ನಾಗರಾಜ ಮೂರ್ತಿ ಮಾತನಾಡಿ, ‘ಸಂಸಾರದಲ್ಲಿ ಸಾಮಾರಸ್ಯ’ ಪುಸ್ತಕವು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ. ಈ ಕೃತಿಯ ಆಶಯದಂತೆ ನಡೆದುಕೊಂಡಲ್ಲಿ ಸದಾ ಹಸನ್ಮುಖಿಯಾಗಿರಲು ಸಾಧ್ಯವಿದೆ‘ ಎಂದರು.

ಪರಿಷತ್ ಗೌರವಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ, ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮೂಖಪ್ಪ, ಡಾ.ಸಿ.ರಾ.ವನ್ನಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಅಂಗಡಿ, ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ಕೋಶಾಧ್ಯಕ್ಷ ಎಸ್.ಎಂ.ಹಂಪಯ್ಯ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಕದಳಿ ವೇದಿಕೆ ಗಣ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.